Monday, December 11, 2023
Homeಇತರೆಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತು ಗಾಂಧೀಜಿ ಮೌಲ್ಯ : ಕಂಗನಾ ರಣಾವತ್ ವಿರುದ್ಧ ಮಾಜಿ...

ಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತು ಗಾಂಧೀಜಿ ಮೌಲ್ಯ : ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ

ಬೆಂಗಳೂರು: ಬಟ್ಟೆ ಬಿಚ್ಚಿ ಓಡಾಡೋರಿಗೇನು ಗೊತ್ತು ಗಾಂಧೀಜಿಯವರ ಬೆಲೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಕಂಗನಾ ನೀಡಿರುವ ಹೇಳಿಕೆಗೆ ತಿರುಗೇಟನ್ನು ನೀಡಿದ್ದಾರೆ.

ಗಾಂಧೀಜಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದನ್ನು ವಿರೋಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತು ಗಾಂಧೀಜಿಯ ವ್ಯಕ್ತಿತ್ವ. ಇವರು ಹೊಟ್ಟೆಪಾಡಿಗಾಗಿ ಬಟ್ಟೆಯನ್ನು ಬಿಚ್ಚಿ ಓಡಾಡುವವರು ಎಂದರು.

ಕಂಗನಾ ರಣಾವತ್ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ದೇಶಕ್ಕೆ ಸ್ವಾತಂತ್ರ ಸಿಕ್ಕಿರುವುದು 1947 ರಲ್ಲಿ ಅಲ್ಲ 2014 ರಲ್ಲಿ ಎಂದಿದ್ದರು ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶವನ್ನು ವ್ಯಕ್ತಪಡಿಸಿ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅದಾದ ನಂತರ ಗಾಂಧೀಜಿಯವರ ಬಗ್ಗೆ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Most Popular

Recent Comments