ನವದೆಹಲಿ: ದೇಶಕ್ಕೆ ಬಂದಿರುವ ಸ್ವತಂತ್ರ್ಯದ ಬಗ್ಗೆ ಅಗೌರವ ತೋರಿಸಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಅನೇಕ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶ ಭಾರತಕ್ಕೆ ನಿಜವಾಗಿಯೂ ಸ್ವಾತಂತ್ರ ಸಿಕ್ಕಿರುವುದು 2014 ರಲ್ಲಿ. 1947 ಆಗಸ್ಟ್ 15 ರಂದು ಸಿಕ್ಕಿರುವುದು ಒಂದು ಭಿಕ್ಷೆ ಎಂದು ಕಂಗನಾ ರಣಾವತ್ ಹೇಳಿದ್ದರು.
ನಟಿ ಕಂಗನಾ ರವರ ಹೇಳಿಕೆಯನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮ ಕಂಗನಾ ಹೇಳಿರುವ ಹೇಳಿಕೆಗೆ ಮೋದಿಯವರು ಸುಮ್ಮನೆ ಇದ್ದಿದ್ದು ಮಾತ್ರವಲ್ಲದೆ ಅವರನ್ನೇ ಅನುಸರಿಸುತ್ತಿದ್ದಾರೆ. ಈ ದೇಶಕ್ಕೆ ಅಗೌರವ ತೋರಿಸಿದ ಇವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟ್ವಿಟ್ ಮಾಡಿದ್ದಾರೆ.
ದೇಶದ ಕಾನೂನು, ಭಾರತದ ಸಂವಿಧಾನದ ಬಗ್ಗೆ ಗೌರವ ಭಾವನೆಯೇ ಇಲ್ಲದ ಕಂಗನಾ ಅವರಿಗೆ ನೀಡಿರುವ ಶ್ರೇಷ್ಠ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಹಾಗೂ ಮುಂಬೈ ನಲ್ಲಿ ಕಂಗನಾ ವಿರುದ್ಧ ಅಮ್ ಆದ್ಮಿ ಪಕ್ಷ ದೂರನ್ನು ನೀಡಿದ್ದಾರೆ.
ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ದೊರೆತಿದೆ, ದೈರ್ಯದಿಂದ ಹೋರಾಡಿ ತಮ್ಮ ಪ್ರಾಣವನ್ನೇ ಪಣಕಿತ್ತು ಹೋರಾಡಿ ಮಡಿದ ವೀರರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಾರೆ.