ಬೆಂಗಳೂರು : ಪುನೀತ್ ರಾಜ್ ಕುಮಾರ್ ರವರು ನಿಧನರಾದ ದಿನದಿಂದ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಹಗಲಿರುಳು ಶ್ರಮಿಸಿದ ಬಗ್ಗೆ ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ರವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯುತ್ತಿದ್ದಂತೆ ಅನೇಕ ಜನರು ಆಸ್ಪತ್ರೆಯನ್ನು ಸುತ್ತುವರೆದಿದ್ದರು. ಅನೇಕ ಜನ ಸಿನಿತಾರೆಯರು ಬರುತ್ತಿದ್ದರಿಂದ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಕಾವಲುಗರಾರನ್ನಾಗಿ ರಾಜ್ಯದ ಸಾವಿರಾರು ಪೊಲೀಸರನ್ನು ನೇಮಿಸಲಾಗಿತ್ತು.
ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಕುಟುಂಬದವರು ಹಾಗೂ ಪುನೀತ್ ರವರ ಅಭಿಮಾನಿಗಳು ಸಹ ಪರಿಸ್ಥಿತಿಯನ್ನು ಅರಿತುಕೊಂಡು ಉದ್ವೇಗಕ್ಕೆ ಒಳಗಾಗದೆ ಸಹಾಯವನ್ನು ಮಾಡಿದ್ದಾರೆ ಆದ್ದರಿಂದ ಪೊಲೀಸರು ಸಹ ಹಗಲಿರುಳು ಶ್ರಮಪಟ್ಟು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ.
ಮರಣದ ಸುದ್ದಿ ತಿಳಿದು ಸ್ಥಳಕ್ಕೆ ಬರುವ ಲಕ್ಷಗಟ್ಟಲೆ ಅಭಿಮಾನಿಗಳನ್ನು ಸುಧಾರಿಸಲು 2000 ಪೋಲೀಸರು, 2 ಸಿ ಆರ್ ಪಿ ಎಫ್ ಮತ್ತು ಆರ್ ಎಫ್ ತಂಡವನ್ನು ಸಹ ಕರೆಸಲಾಗಿತ್ತು ಹಾಗೂ ಕಂಠೀರವ ಸ್ಟುಡಿಯೋ ಮತ್ತು ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ರವರ ಪಾರ್ಥಿವ ಶರೀರದ ದರ್ಶನಕ್ಕೆ ನೂಕು ನುಗ್ಗುಲು ನಡೆಯದೆ ಇರಲು ಅನೇಕ ಕಡೆ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು ಇದರಿಂದ ಅಭಿಮಾನಿಗಳನ್ನು ಸುಧಾರಿಸಲು ಸಾಧ್ಯವಾಯಿತು. ಅಭಿಮಾನಿಗಳು ಬಹಳ ದುಃಖದಲ್ಲಿದ್ದರು ಸಹ ಪೋಲೀಸರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಹಕಾರವನ್ನು ನೀಡಿದ್ದಾರೆ. ಅಚ್ಚುಕಟ್ಟಾಗಿ ಕಾರ್ಯವನ್ನು ನಿರ್ವಹಿಸಿದ ಪೋಲೀಸರ ಕಾರ್ಯವೈಖರಿಗೆ ಕಮಲ್ ಪಂತ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.