Thursday, April 18, 2024
Homeಬಯಲುಸೀಮೆಕಲಬುರಗಿಯಲ್ಲಿ ಹೆಚ್ಚಳವಾದ ಬಾಲ್ಯವಿವಾಹ: ಕೊರೋನಾ ನಡುವೆ ಆತಂಕಗೊಂಡ ಅಧಿಕಾರಿಗಳು

ಕಲಬುರಗಿಯಲ್ಲಿ ಹೆಚ್ಚಳವಾದ ಬಾಲ್ಯವಿವಾಹ: ಕೊರೋನಾ ನಡುವೆ ಆತಂಕಗೊಂಡ ಅಧಿಕಾರಿಗಳು

ಕಲಬುರಗಿ: ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಎದುರಾದ ಬೆನ್ನಲ್ಲೇ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹಗಳ ಸಂಖ್ಯೆಯು ಹೆಚ್ಚಾಗಿದೆ, ಈ ಬೆಳವಣಿಗೆಯು ಇದೀಗ ಅಧಿಕಾರಿಗಳಲ್ಲಿ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.

ಅಂಕಿಅoಶಗಳ ಪ್ರಕಾರ, ಕಳೆದ ವರ್ಷ (2020-21) ಏಪ್ರಿಲ್ ಮತ್ತು ಮಾರ್ಚ್ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಏಳು ಬಾಲ್ಯ ವಿವಾಹಗಳು ನಡೆದಿದ್ದು, 135 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದರು. ಆದರೆ, ಈ ವರ್ಷ ಕೇವಲ ನಾಲ್ಕು ತಿಂಗಳುಗಳಲ್ಲಿ (ಏಪ್ರಿಲ್-ಜುಲೈ ವರೆಗೆ) 15 ಬಾಲ್ಯವಿವಾಹಗಳು ನಡೆದಿವೆ. ಈ ಮಧ್ಯೆ 83 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆಂದು ತಿಳಿದುಬಂದಿದೆ.

ಈ ಬೆಳವಣಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಮಕ್ಕಳು ಮತ್ತು ಮಹಿಳೆಯರ ಕಲ್ಯಾಣದಲ್ಲಿ ತೊಡಗಿರುವ ಎನ್‌ಜಿಒ ಮಸ್ಕರ್ ಪ್ರತಿಷ್ಠಾನದ ನಿರ್ದೇಶಕ ವಿಠಲ್ ಚಿಕಣಿ ಅವರು, ಶಾಲೆಗಳು ಮುಚ್ಚಿರುವುದರಿಂದ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ನಡುವೆ ಸಂವಹನ ಕೊರತೆ ಎದುರಾಗಿರುವುದರಿಂದ ಹಿಂದಿನ ವರ್ಷಗಳಿಗಿಂತ ಈ ವರ್ಷ ಅತೀ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ ಎಂದು ಹೇಳಿದ್ದಾರೆ.

ಅರಿವಿನ ಕೊರತೆ ಮತ್ತು ಬಡತನ ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಪೋಷಕರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಅಧಿಕಾರಿಗಳ ಗಮನಕ್ಕೆ ತರದೆಯೇ ಬಾಲ್ಯವಿವಾಹಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರದ ಅಧಿಕಾರಿಗಳೂ ಕೂಡ ಒಪ್ಪಿಕೊಂಡಿದ್ದಾರೆoದು ಮೂಲಗಳು ತಿಳಿಸಿವೆ.

Most Popular

Recent Comments