ಕಾಬುಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಆತಂಕಗೊoಡಿರುವ ಅಲ್ಲಿನ ಜನರು ರಾಷ್ಟ್ರವನ್ನು ತೊರೆಯಲು ತುದಿಗಾಲಲ್ಲಿ ನಿಂತಿದ್ದು ಸಾವಿರಾರು ಸಂಖ್ಯೆಯ ಜನರು ಕಾಬುಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಈ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಬಂದoತಹ ಅಮೆರಿಕಾದ ಸೇನಾಪಡೆಯ ವಿಮಾನವು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದಾರೆ ಇದರ ಪರಿಣಾಮ ಸ್ಥಳದಲ್ಲಿ ನೆರೆದಿದ್ದ ಜನರು ಆತಂಕಕ್ಕೊಳಗಾಗಿದ್ದಾರೆ.
ಆನಂತರ ಅಮೆರಿಕಾದ ಅಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ, ನಮ್ಮ ರಾಷ್ಟ್ರದ ಅಧಿಕಾರಿಗಳು ವಿದೇಶಿ ಸಿಬ್ಬಂದಿ ಹಾಗೂ ಸ್ಥಳೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲು ಸೇನಾ ವಿಮಾನಗಳನ್ನು ಕಾಬುಲ್’ಗೆ ಕಳುಹಿಸಲಾಗಿದೆ ಈ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಅತಿಯಾದ ಜನ ಸಂದಣಿ ಇದ್ದರಿಂದ ಜನದಟ್ಟಣೆಯನ್ನು ನಿವಾರಿಸಲು ಗಾಳಿಯಲ್ಲಿ ಗುಂಡನ್ನು ಹಾರಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.