Saturday, June 10, 2023
Homeಇತರೆಸಿ ಆರ್ ಪಿ ಎಫ್ ಕಾರ್ಯಾಚರಣೆ : 8 ಮಂದಿ ನಕ್ಸಲರು ಅರೆಸ್ಟ್

ಸಿ ಆರ್ ಪಿ ಎಫ್ ಕಾರ್ಯಾಚರಣೆ : 8 ಮಂದಿ ನಕ್ಸಲರು ಅರೆಸ್ಟ್

ಛತ್ತೀಸ್ ಗಢ: ದಕ್ಷಿಣ ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಮೋರೆಪಲ್ಲಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಕೋಬ್ರಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ನಕ್ಸಲ್ ಗಳನ್ನು ಬಂಧಿಸಲಾಗಿದೆ.

ಬಂಧಿತ ನಕ್ಸಲ್ ಗಳಲ್ಲಿ ‘ಕವಾಸಿ ರಾಜು ಅಲಿಯಾಸ್ ಸಂತು’ ಬೆಟಾಲಿಯನ್ ಸದಸ್ಯನಾಗಿದ್ದು ಹಾಗೂ ‘ಕಲ್ಮು ಮಾಡಾ’ ಮಿಲಿಷಿಯಾ ಕಂಪನಿ ಕಮಾಂಡರ್ ಆಗಿದ್ದಾನೆ. ಈ ಹಿಂದೆ ಇವರಿಬ್ಬರ ಪತ್ತೆ ಹಿಡಿದವರಿಗೆ ತಲೆಗೆ 8 ಮತ್ತು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇತರೆ ಆರೋಪಿಗಳ ಸುಳಿವು ನೀಡಿದ್ದವರಿಗೆ ತಲಾ 1 ಲಕ್ಷ ರೂಪಾಯಿ ನೀಡುವುದಾಗಿ ಬಹುಮಾನವನ್ನು ಘೋಷಿಸಲಾಗಿತ್ತು.

ಈ ಪ್ರದೇಶದಲ್ಲಿ ನಕ್ಸಲರ ಚಲನವಲನದ ಬಗ್ಗೆ ನಮಗೆ ಗುಪ್ತಚರ ದಳ ಮಾಹಿತಿಯನ್ನು ನೀಡಿತ್ತು. ಹೀಗಾಗಿ ನವೆಂಬರ್ 2ರಿಂದ ರಕ್ಷಣಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಇದೀಗ ಒಟ್ಟು 8 ಮಂದಿಯನ್ನ ಬಂಧಿಸಲಾಗಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಅವರು ಮಾಹಿತಿಯನ್ನು ನೀಡಿದ್ದಾರೆ.

ಬಂಧಿಸಲಾದ ಎಲ್ಲಾ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ಅವರ ಬಳಿಯಿದ್ದ 35 ಡಿಟೋನೇಟರ್‌ಗಳು, 6 ಜಿಲೆಟಿನ್ ರಾಡ್‌ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಬ್ಯಾಟರಿಗಳು, ವೈರ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Most Popular

Recent Comments