Tuesday, November 28, 2023
Homeಉದ್ಯೋಗʼಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿʼಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಅಹ್ವಾನ

ʼಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿʼಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಅಹ್ವಾನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಲೆಕ್ಕಿಗರು ಮತ್ತು ಜವಾನರ ತಲಾ 1 ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯು 1 ವರ್ಷದ ಕರಾರಿನ ಆಧಾರದ ಮೇಲಿದ್ದು ಆಯ್ಕೆಯಾದ ಸಿಬ್ಬಂದಿಗಳಿಗೆ ಮಾಸಿಕ ಗೌರವಧನ ನೀಡಲಾಗುತ್ತದೆ.
ಲೆಕ್ಕಿಗರ ಹುದ್ದೆಗೆ ಗೌರವಧನ ರೂ.13,310/- ಆಗಿದ್ದು ಅಭ್ಯರ್ಥಿಯು .ಬಿ.ಕಾಂ ಪದವಿ ಹೊಂದಿರಬೇಕು
ಲೆಕ್ಕ ಪತ್ರಗಳನ್ನು ನಿರ್ವಹಿಸುವ ಕುರಿತು ಕನಿಷ್ಟ 05 ವರ್ಷಗಳ ಅನುಭವ ಹೊಂದಿರಬೇಕು(ಅನುಭವ ಪ್ರಮಾಣ ಪತ್ರ ಲಗತ್ತಿಸಬೇಕು),
ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ.
ಟ್ಯಾಲಿ  ಉಪಯೋಗಿಸುವ ಜ್ಙಾನ ಮತ್ತು ಕೌಶಲ್ಯ ಇರಬೇಕು. ಕಛೇರಿ ಪತ್ರ ವ್ಯವಹಾರಗಳ ಲೆಕ್ಕ ಪತ್ರಗಳ ವ್ಯವಹಾರಗಳನ್ನು ಗಣಕಿಕೃತದಲ್ಲಿ ನಮೂದಿಸಿ ಕೇಂದ್ರ ಕಛೇರಿಗಳಿಗೆ ಕಳುಹಿಸುವ ಕುರಿತು ಪರಿಣತಿಯನ್ನು ಹೊಂದಿರಬೇಕು.

ಕಚೇರಿ ಜವಾನರು ಹುದ್ದೆಗೆ ಗೌರವಧನ ರೂ.10,648/-ಆಗಿದ್ದು, ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಕಛೇರಿಯಲ್ಲಿ ಹಾಗೂ ಇತರೆ ಶುಚಿತ್ವ ಕಾಪಾಡುವ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಓದಲು, ಬರೆಯಲು ಕಡ್ಡಾಯವಾಗಿ ಬರಬೇಕು. ಕಛೇರಿ ವ್ಯವಹಾರಕ್ಕೆ ಬ್ಯಾಂಕು, ಇತರೆ ಇಲಾಖೆಗಳಿಗೆ ಹೋಗಬೇಕಾಗಿರುತ್ತದೆ. ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಾಗಿರಬಾರದು.

ಅಭ್ಯರ್ಥಿಗಳು ಅರ್ಜಿಯನ್ನು ಬಿಳಿ ಹಾಳೆಯಲ್ಲಿ, ಸ್ವವಿವರಗಳನ್ನು ನಮೂದಿಸಿದ ಬಯೋಡಾಟ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸೊಸೈಟಿ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಇವರ ಹೆಸರಿಗೆ ಬರೆದು, ಈ ಅರ್ಜಿಯನ್ನು ಕಾರ್ಮಿಕ ಅಧಿಕಾರಿ/ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಛೇರಿ, 2ನೇ ಮಹಡಿ ವಾಣಿಜ್ಯ ಸಂಕೀರ್ಣ, ಸಿ.ಐ.ಟಿ.ಬಿ ಕಾಂಪ್ಲೆಕ್ಸ್, ಪೊಲೀಸ್ ಚೌಕಿ, ವಿನೋಬನಗರ, ಶಿವಮೊಗ್ಗ ಇವರಿಗೆ ಸೆ.27 ರೊಳಗೆ ತಲುಪುವಂತೆ ಸಲ್ಲಿಸಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

Most Popular

Recent Comments