Sunday, June 4, 2023
Homeಉದ್ಯೋಗಮಲೆನಾಡಿನ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್; ಸಿಂಗಾಪುರದ ಖ್ಯಾತ VANS CHEMISTRY ಕಂಪೆನಿಯಲ್ಲಿ ಉದ್ಯೋಗಾವಕಾಶ

ಮಲೆನಾಡಿನ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್; ಸಿಂಗಾಪುರದ ಖ್ಯಾತ VANS CHEMISTRY ಕಂಪೆನಿಯಲ್ಲಿ ಉದ್ಯೋಗಾವಕಾಶ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಾರ್ಯಕ್ಕೂ ಮಷೀನ್ ಅಥವಾ ಇನ್ನಾವುದೋ ಡಿಜಿಟಲ್ ಉಪಕರಣಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಉಪಕರಣಗಳು ನಿಗದಿತ ಸಮಯಗಳ ನಂತರ ಅದರ ಕ್ಷಮತೆಯನ್ನು ಕಳೆದುಕೊಳ್ಳಲಿದ್ದು ಇವುಗಳ ಮರುಬಳಕೆ ಹಾಗೂ ರೀ ಸೈಕ್ಲಿಂಗ್ ಪ್ರಕ್ರಿಯೆ ಕುರಿತು ಕೆಲವೇ ಜನರಲ್ಲಿ ಅರಿವಿದೆ. ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹಾಗೂ ನಿರ್ವಹಣೆ ಕುರಿತಾಗಿ ಮಾಹಿತಿ ಹೊಂದಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಲೆನಾಡಿನ ಸಾಧಕ ವೆಂಕಟೇಶ್ ಮೂರ್ತಿ ಅವರು ತಮ್ಮ ಕಂಪೆನಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡುತ್ತಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಾಡಿಯವರಾದ ವೆಂಕಟೇಶ್ ಮೂರ್ತಿ ಅವರು ರೈತಾಪಿ ವರ್ಗದ ಕುಟುಂಬದವರು. ತಮ್ಮ ಕಾಲೇಜು ಅವಧಿಯ ಶಿಕ್ಷಣವನ್ನು ಮಲೆನಾಡಿನಲ್ಲೇ ಮುಗಿಸಿದ ಅವರು ಉನ್ನತ ಶಿಕ್ಷಣವನ್ನು ಸುರತ್ಕಲ್ಲಿನಲ್ಲಿ ಹಾಗೂ MBA ಪದವಿಯನ್ನು ಸಿಂಗಾಪುರದಲ್ಲಿ ಪಡೆದು ಈ ತ್ಯಾಜ್ಯ ಇಂಡಸ್ಟ್ರಿಯಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದು, ಪ್ರಸ್ತುತ VANS CHEMISTRY ಕಂಪೆನಿಯನ್ನು ನಡೆಸುತ್ತಿದ್ದು ಅದರ ಸಂಸ್ಥಾಪಕರಾಗಿ ಹಾಗೂ ನಿರ್ದೇಶಕರಾಗಿದ್ದಾರೆ. ಇದಲ್ಲದೇ ಈ ತ್ಯಾಜ್ಯ ಸಂಸ್ಥೆಯ ಏಷ್ಯಾ ಖಂಡದ ರಾಯಭಾರಿಯಾಗಿದ್ದಾರೆ. ಅಂತೆಯೇ ಹತ್ತಕ್ಕೂ ಅಧಿಕ ದೇಶಗಳಲ್ಲಿ ತಮ್ಮ ಕಂಪನಿಯನ್ನು ಹೊಂದಿದ್ದಾರೆ.

ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅಪಾರ ಸಂಖ್ಯೆಯ ಜನರು ಗ್ಯಾಜೆಟ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸುತ್ತಾರೆ, ಅದರ ಬಳಕೆಯ ನಂತರ ಜನರು ಇ – ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರಿಂದ ಜನರಿಗೆ ಗಂಭೀರ ಸ್ವರೂಪದ ಸಮಸ್ಯೆಗಳು ಎದುರಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮರುಬಳಕೆ ಮತ್ತು ಸೂಕ್ತವಾದ ನಿರ್ವಹಣೆ ಹಾನಿಕಾರಕ ಅಂಶಗಳನ್ನೂ ಸಂಸ್ಕರಿಸುವ ನಿಟ್ಟಿನಲ್ಲಿ ತಮ್ಮ ಅನುಭವ ಮತ್ತು ಸಂಸ್ಥೆಯು ನಡೆಸುವ ಕಾರ್ಯ ಚಟುವಟಿಕೆಗಳಿಂದ ಇಂದು ವ್ಯಾನ್ಸ್ ಕೆಮಿಸ್ಟ್ರಿ ಸಂಸ್ಥೆಯು ಮುಂಚೂಣಿಯಲ್ಲಿದೆ.

ಸಿಂಗಾಪುರದ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಾವಕಾಶ:
ಪ್ರಸ್ತುತ ಸಿಂಗಾಪುರ್ ನ ಪ್ರತಿಷ್ಠಿತ ಕಂಪೆನಿಯಾದ ವ್ಯಾನ್ಸ್ ಕೆಮಿಸ್ಟ್ರಿಯಲ್ಲಿ ಉದ್ಯೋಗಾವಕಾಶಗಳಿದ್ದು ಮಲೆನಾಡಿನ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

DIPLOMA IN METALLURGICAL ENGINEERING AND CHEMICAL ENGINEERING ಈ ವಿಭಾಗದಲ್ಲಿ ಯು.ಎಸ್.ಎ, ಮಲೇಷಿಯಾ, ಟರ್ಕಿ, ಸಿಂಗಾಪುರ್, ಸೇರಿದಂತೆ ಗ್ಲೋಬಲ್ ಪ್ರಾಜೆಕ್ಟ್ ಗಳಿಗಾಗಿ ಜೂನಿಯರ್ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು ವಾಟ್ಸಾಪ್ ನಂಬರ್ +65 98717295 (ವಾಟ್ಸಾಪ್ ಮಾತ್ರ) 
Gmail: venky@vanschemistry.com ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಹಿಂದೂ ಸಂಘಟನೆಯ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: 

ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಕಳೆದ 8 ತಿಂಗಳ ಹಿಂದೆ, ದುಷ್ಕರ್ಮಿಗಳಿಂದ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಸ್ಥರಿಗೆ ದುಷ್ಕರ್ಮಿಗಳು ತಡರಾತ್ರಿ ಬೆದರಿಕೆ ಹಾಕಿ, ಇನ್ನೋರ್ವನ ಮೇಲೆ ಕಲ್ಲು ಮತ್ತಿತರ ವಸ್ತುಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಶಿವಮೊಗ್ಗದ ಸೀಗೆಹಟ್ಟಿಗೆ ಮೂರು ಬೈಕ್ ಗಳಲ್ಲಿ ಆಗಮಿಸಿದ್ದ ದುಷ್ಕರ್ಮಿಗಳ ತಂಡ, ನಿಲ್ಲಿಸಲಾಗಿದ್ದ ಕೆಲ ವಾಹನಗಳನ್ನು ಡ್ಯಾಮೇಜ್ ಮಾಡಿ ನಂತರದಲ್ಲಿ ಹರ್ಷನ ಕುಟುಂಬದ ಸದಸ್ಯರಿಗೆ ನಿಮ್ಮನ್ನು ಬಿಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲಿಂದ ತೆರಳುವಾಗ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ.

ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದ ಗುಂಪು ಬೈಕ್ ನಲ್ಲಿ ಓಡಾಟ ನಡೆಸಿದೆ. ಸೀಗೆಹಟ್ಟಿ ಮತ್ತು ಶಿವಮೊಗ್ಗದ ಭರ್ಮಪ್ಪ ಬಡಾವಣೆಯಲ್ಲಿ ಓಡಾಡುತ್ತಿದ್ದ ಗುಂಪು ಹರ್ಷನ ಮನೆ ಬಳಿ ಬೈಕ್ ನಿಲ್ಲಿಸಿ ಹರ್ಷ ಸಹೋದರಿ ಹಾಗೂ ಕುಟುಂಬದವರಿಗೆ ಬೆದರಿಕೆ ಹಾಕಿ ನಂತರದಲ್ಲಿ, ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗಾಯಾಳು ಪ್ರಕಾಶನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀಗೆಹಟ್ಟಿ ಬಡಾವಣೆಯಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಘಟನಾ ಸ್ಥಳಕ್ಕೆ ಎಸ್.ಪಿ. ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಹಿಂಬಾಲಿಸಿದಾಗ ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಫೀಲ್ಡಿಗಿಳಿದಿದ್ದಾರೆ.

Most Popular

Recent Comments