ಬೆಂಗಳೂರು: ಪೇಜಾವರ ಶ್ರೀಗಳು ನನಗೆ ತುಂಬಾ ಆತ್ಮೀಯರು ಅವರು ದಲಿತರ ಕಾಲೋನಿಗೆ ಹೋದಾಗ ಪಾನಕ, ಮಜ್ಜಿಗೆಯನ್ನು ತಗೊಳ್ಳಿ ಅಂದರೆ ಬೇಡ ಎಂದಿದ್ದರು ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆಯನ್ನು ನೀಡಿದ್ದಾರೆ.
ಇಂದು ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಅವರು ಹಿಂದೆ ನಮ್ಮ ದಲಿತರ ಕಾಲೋನಿಗೆ ಹೋದ ಸಂದರ್ಭದಲ್ಲಿ ಅವರಿಗೆ ಪಾನಕ ಮತ್ತು ಮಜ್ಜಿಗೆಯನ್ನು ತೆಗೆದುಕೊಳ್ಳಲು ಹೇಳಿದಾಗ ಅವರು ಅದನ್ನು ನಿರಾಕರಿಸಿದ್ದರು. ನನಗೆ ಪೇಜಾವರ ಶ್ರೀ ಬಹಳ ಆತ್ಮೀಯರಾಗಿದ್ದರು ನನಗೆ ವಿಚಾರ ತಿಳಿದಿದೆ ಎಂದರು.
ಹಿಂದೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂದಾಗನೂ ಪೇಜಾವರ ಶ್ರೀಗಳು ಅದನ್ನು ನಿರಾಕರಿಸಿದ್ದರು ಅಂದು ಅವರು ನ್ಯಾಯಾಲಯದ ಕಾನೂನಿಗೆ ಅವಮಾನ ಮಾಡಿಲ್ಲವಾ. ಹಂಸಲೇಖ ನವರ ಹೇಳಿಕೆಯಲ್ಲಿ ಯಾವುದೇ ರೀತಿಯ ಲೋಪಗಳಿಲ್ಲ ಅವರ ಮಾತಿನಲ್ಲಿ ಯಾವುದು ತಪ್ಪಿದೆ ಎಂದು ಹಂಸಲೇಖನವರನ್ನು ಬೆಂಬಲಿಸಿದರು.