ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಹೆಸರು: ಆಡಳಿತ ಸಹಾಯಕರು, ತಾಲೂಕು ಐಇಸಿ ಸಂಯೋಜಕ
ಒಟ್ಟು ಹುದ್ದೆಗಳು: 10
ಆಡಳಿತ ಸಹಾಯಕರು: 9
ತಾಲೂಕು ಐಇಸಿ ಸಂಯೋಜಕ: 1
ಉದ್ಯೋಗ ಸ್ಥಳ ಬಾಗಲಕೋಟೆ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-09-2021
ಅರ್ಜಿಯನ್ನು ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯ, ಬಾಗಲಕೋಟೆಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅಜಯ್ ಸೂಳೀಕೇರಿ, ಐಇಸಿ ಸಂಯೋಜಕ ಅವರಿಗೆ ಸಲ್ಲಿಸಬೇಕು.
ಆಯ್ಕೆ ವಿಧಾನ:
ಹೊರ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ:
ಆಡಳಿತ ಸಹಾಯಕ ಹುದ್ದೆಗೆ, ಬಿಕಾಂ ಪದವಿ ಜೊತೆಗೆ ಕನ್ನಡ, ಇಂಗ್ಲಿಷ್ ಭಾಷೆ ಮತ್ತು ಟೈಪಿಂಗ್ ನಲ್ಲಿ ಪರಿಣಿತಿಯನ್ನು ಹೊಂದಿರಬೇಕು. ಕಂಪ್ಯೂಟರ್ ಪರಿಣಿತಿಯನ್ನು ಹೊಂದಿರಬೇಕು.
ತಾಲೂಕು ಐಇಸಿ ಸಂಯೋಜಕ ಹುದ್ದೆಗೆ ಸ್ನಾತಕೋತ್ತರ ಪದವಿ ಕಡ್ಡಾಯವಾಗಿದೆ
ಅನುಭವ:
ತಾಲೂಕು ಐಇಸಿ ಸಂಯೋಜಕ ಹುದ್ದೆಗೆ 2 ರಿಂದ 3 ವರ್ಷ ಸಂಭoಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.