ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಮಗಳು ವಿಜೇತಾ ಟ್ವೀಟ್ ಮಾಡಿದ್ದಾರೆ.
ರಾಜ್ಯದ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ? ಎಂದು ಪ್ರಶ್ನಿಸಿರುವ ಅವರು, ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಇನ್ನೂ ಬಲಿಷ್ಠವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ವಿಜೇತಾರವರು ಹಿರಿಯ ಮತ್ತು ಪ್ರಭಾವಿ ಬಿಜೆಪಿ ನಾಯಕರಾಗಿದ್ದಂತಹ ಅನಂತಕುಮಾರ್‌ರವರ ಪುತ್ರಿಯಾಗಿರುವ ಕಾರಣದಿಂದ ಅವರು ಮಾಡಿರುವಂತಹ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಚರ್ಚೆಗೆ ಕಾರಣವಾಗಿದೆ.
ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮತ್ತು ಮಗಳು ಜೆಡಿಎಸ್‍ಗೆ ಬಂದರೆ ಸ್ವಾಗತ. ಪಕ್ಷದಲ್ಲಿ ಅವರಿಗೆ ಉತ್ತಮ ಗೌರವ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ