ಟೊಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ (ಈಟಿ ಎಸೆತ) ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶದ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಚೋಪ್ರಾ 86.65 ಮೀಟರ್ ಸಾಧನೆಯೊಂದಿಗೆ ಫೈನಲ್ ಹಂತಕ್ಕೆ ನೇರ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದ ಪುರುಷರ ಜಾವೆಲಿನ್ ಥ್ರೋನಲ್ಲಿ ಚೋಪ್ರಾ ಗ್ರೂಪ್ ‘ಎ’ನಲ್ಲಿದ್ದಾರೆ.
ಗ್ರೂಪ್ ‘ಎ’ನಲ್ಲಿ ಸ್ಪರ್ಧಿಸುತ್ತಿರುವ ಚೋಪ್ರಾ ಪುರುಷರ ಲಾಂಗ್ ಥ್ರೋನ್ ಕ್ವಾಲಿಫಿಕೇಷನ್ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದಾರೆ. 15ನೇ ಪೊಸಿಷನ್‌ನಲ್ಲಿ ಲಾಂಗ್ ಥ್ರೋನ್ ಮಾಡಿದ ಅವರು ಸುಮಾರು 86.65 ಮೀಟರ್ ಜಾವೆಲಿನ್ ಥ್ರೋ ಮಾಡುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟದ್ದಾರೆ.
ಜಾವೆಲಿನ್ ಥ್ರೋ ಫೈನಲ್ ಪಂದ್ಯ ಮೂರು ದಿನಗಳ ನಂತರ ಅಥವಾ ಆಗಸ್ಟ್ 7 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.