Sunday, October 1, 2023
Homeಆಧ್ಯಾತ್ಮಬಸವಣ್ಣನವರ ವಚನದ ಮೂಲಕ ಹಂಸಲೇಖ ನೀಡಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್.

ಬಸವಣ್ಣನವರ ವಚನದ ಮೂಲಕ ಹಂಸಲೇಖ ನೀಡಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್.

ಪೇಜಾವರ ಗುರುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಸಂಗೀತ ನಿರ್ದೇಶಕ ಹಂಸಲೇಖರವರಿಗೆ ಚಿತ್ರನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವನ್ನು ಮೊದಲು ಸಂತೈಸಿಕೊಳ್ಳಿ, ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ ಎಂದು ಬಸವಣ್ಣನವರ ವಚನವನ್ನು ಪೋಸ್ಟ್ ಮಾಡುವ ಮೂಲಕ ಜಗ್ಗೇಶ್ ಹಂಸಲೇಖ ರವರಿಗೆ ಕಿವಿ ಮಾತನ್ನು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಹಂಸಲೇಖ ರವರು ಪೇಜಾವರ ಗುರುಗಳು ದಲಿತರ ಮನೆಗೆ ಭೇಟಿ ನೀಡಿದ ವಿಚಾರವನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ರಾಜ್ಯದ ಅನೇಕ ಜನರು ಆಕ್ರೋಶಗೊಂಡಿದ್ದರು. ಮತ್ತು ಈ ವಿವಾದಾತ್ಮಕ ಹೇಳಿಕೆ ವ್ಯಾಪಕ ಚರ್ಚೆಗೀಡಾಗಿತ್ತು, ಎಲ್ಲಾ ಜನರು ಹಂಸಲೇಖರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು.

ಮಾತು ಬಲ್ಲ ವ್ಯಕ್ತಿಗೆ ಮಾತು ಮೃಷ್ಟಾನ್ನದಂತೆ ಇದ್ದರೂ ಆ ಮಾತು ಹೊಟ್ಟೆಯನ್ನು ತುಂಬಿಸುವುದಿಲ್ಲ. ಮಾತು ಕೊಟ್ಟರೆ ಆ ಮಾತು ಕೆಟ್ಟರೆ ಆ ಮೃಷ್ಟಾನ್ನ ವಿಷವಾಗಿ ಅಜೀರ್ಣವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗುವುದು ಹಗ್ಗದ ಮೇಲಿನ ನಡಿಗೆ ಇದ್ದ ಹಾಗೆ ಹೆಸರನ್ನು ಪಡೆದುಕೊಳ್ಳುವುದು ಕಷ್ಟ ಆದರೂ ಸುಲಭ ಆದರೆ ಗಳಿಸಿದ ಹೆಸರನ್ನು ಕಳೆದುಕೊಳ್ಳಲು ಒಂದು ಕ್ಷಣ ಸಾಕು ಎಂದು ಹಂಸಲೇಖರವರಿಗೆ ಕಿವಿಮಾತನ್ನು ಹೇಳಿದ್ದಾರೆ.

Most Popular

Recent Comments