ಹುಬ್ಬಳ್ಳಿ : ಉಪನೊಂದಣಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ರವರು ಕಂದಾಯ ಸಚಿವ ಆರ್, ಅಶೋಕ್ ರವರಿಗೆ ಪತ್ರ ಬರೆದಿದ್ದಾರೆ
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಉತ್ತರ ವಲಯದ ಉಪನೊಂದಣಾಧಿಕಾರಿಗಳಾದ ಸೌಮ್ಯಲತಾ ಹಾಗೂ ಪ್ರತಿಭಾ ಬೀಡಿಕರ ಅವರು ನೋಂದಣಿ ಕಾರ್ಯಕ್ಕೆ ಬರುವವರನ್ನು ವಾರಗಟ್ಟಲೆ ಓಡಾಡಿಸುತ್ತಿದ್ದಾರೆ ಹಾಗೂ ಏಜೇಂಟರ ಮೂಲಕ ಹೆಚ್ಚು ಹಣದ ಬೇಡಿಕೆಯನ್ನು ಇಡುತ್ತಿದ್ದಾರೆ ಇವರ ಭ್ರಷ್ಟಾಚಾರ ಹೆಚ್ಚಾಗಿದೆ ಆದ್ದರಿಂದ ಇವರಿಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಇವರನ್ನು ತುರ್ತು ವರ್ಗಾಯಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಇವರಿಬ್ಬರ ವಿರುದ್ಧ ಹುಬ್ಬಳ್ಳಿ ಜನತೆ ಮಾತ್ರವಲ್ಲದೆ ಕ್ರೈಡ್ ಸಂಸ್ಥೆ, ಬಾಂಡ್ ರೈಟರ್, ಕರ್ನಾಟಕ ವಾಣಿಜೋದ್ಯಮ ಸಂಸ್ಥೆ, ಗ್ರಾಹಕ ವೀಡಿಕೆ ಸದಸ್ಯರು ಮುಂತಾದವರು ಪ್ರತಿಭಟನೆಯನ್ನು ನಡೆಸಿ ದೂರನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.