ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತರ ಮನೆಯ ಮೇಲೆ ನಡೆಸಿದ್ದಾರೆ ಐಟಿ ದಾಳಿ ಪ್ರಕರಣದಲ್ಲಿ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ದಾಳಿಯಲ್ಲಿ ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಬಗ್ಗೆ ಇಲಾಖೆ ತನಿಖೆ ನಡೆಸಿದ ಅಧಿಕಾರಿಗಳಿಂದ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಐಟಿ ದಾಳಿಯಲ್ಲಿ 750 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಇವರು ಇಷ್ಟೊಂದು ಹಣವನ್ನು ಪಡೆಯಲು ನೀರಾವರಿ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಅಕ್ರಮವೆಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿಯ ಸಂದರ್ಭದಲ್ಲಿ 4.69 ಕೋಟಿ ರೂಪಾಯಿ ಮೌಲ್ಯದ ನಗದು ಜಪ್ತಿ ಮಾಡಲಾಗಿದೆ.8.6 ಕೋಟಿ ಮೌಲ್ಯದ ಚಿನ್ನ, 20 ಲಕ್ಷದ ಬೆಳ್ಳಿ ಜಪ್ತಿ ಮಾಡಲಾಗಿದೆ.
4 ರಾಜ್ಯಗಳಲ್ಲಿ 47 ಕಡೆ ದಾಳಿಯನ್ನು ನಡೆಸಲಾಗಿತ್ತು. 40 ಜನರ ಹೆಸರಿನಲ್ಲಿ ಅಕ್ರಮವಾಗಿ ಉಪಗುತ್ತಿಗೆ ಪಡೆಯಲಾಗಿದ್ದು, 750 ಕೋಟಿ ರೂಪಾಯಿ ಅಕ್ರಮ ನಡೆದಿದೆ. 482 ಕೋಟಿ ರೂಪಾಯಿ ಲೆಕ್ಕವಿಲ್ಲದ ಹಣ ಎಂದು ಕಂಪನಿಗಳು ಒಪ್ಪಿಕೊಂಡಿದೆ. 380 ಕೋಟಿ ರೂಪಾಯಿ ಕಾರ್ಮಿಕ ವೆಚ್ಚವನ್ನು ಕಂಪನಿ ತೋರಿಸಿವೆ. ಮೂವರು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ಮಾಧ್ಯಮ ವರ್ಗದವರಿಗೆ ಮಾಹಿತಿಯನ್ನು ನೀಡಿದ್ದಾರೆ.