ಪೆಟ್ರೋಲ್ ಬಂಕ್‌ಗಳು ಸದಾ ವಾಹನ ಸವಾರರಿಂದ ತುಂಬಿ ತುಳುಕುತ್ತಿರುತ್ತವೆ. ಪೆಟ್ರೋಲ್, ಡೀಸೆಲ್‌ಗಾಗಿ ಸರತಿ ಸಾಲುಗಳಿಂದ ಕೂಡಿದ್ದು, ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತವೆ.
ಇದನ್ನೂ ಓದಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಾವು
ಪೆಟ್ರೋಲ್ ಬಂಕ್ ನಲ್ಲಿ ಜನರಿಗೆ ಕೆಲವು ಉಚಿತ ಸೇವೆಗಳೂ ಇವೆ. ಇವು ಉಚಿತ ಎಂದು ಅನೇಕರಿಗೆ ತಿಳಿದಿಲ್ಲ. ಸರ್ಕಾರಗಳು ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಮಾಲೀಕರಿಗೆ ಈ 6 ಸೇವೆಗಳನ್ನು ನೀಡಬೇಕಾಗಿ ಸೂಚಿಸುತ್ತವೆ. ಸರ್ಕಾರಗಳು ಈ 6 ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಿದರೆ ಮಾತ್ರ ಪೆಟ್ರೋಲ್ ಬಂಕ್‌ಗಳಿಗೆ ಅನುಮತಿ ನೀಡುತ್ತದೆ.
ಈ ಆರು ಸೇವೆಗಳನ್ನು ಒದಗಿಸದಿದ್ದಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧವೂ ದೂರು ದಾಖಲಿಸಬಹುದು. ಆದರೆ ಈಗ ಪೆಟ್ರೋಲ್ ಬಂಕ್‌ಗಳು ಉಚಿತವಾಗಿ ನೀಡುವ 6 ಉಚಿತ ಸೇವೆಗಳನ್ನು ನಾವು ತಿಳಿಯೋಣ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣ
- ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
- ಹಿಂದು ಬ್ರಿಗೇಡ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಹಿಳಾ ಅಭ್ಯರ್ಥಿ
1. ಉಚಿತ ನೀರಿನ ವ್ಯವಸ್ಥೆ:
ಮುಖ್ಯವಾಗಿ ಪೆಟ್ರೋಲ್ ಬಂಕ್ ನಲ್ಲಿ ಜನರಿಗೆ ಉಚಿತವಾಗಿ ಉತ್ತಮ ನೀರಿನ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಬಂಕ್ ಡೀಲರ್ ಸ್ವತಃ ಆರ್ ವಿ ಯಂತ್ರ ಮತ್ತು ನೀರಿನ ಸಂಪರ್ಕ ಪಡೆಯಬೇಕು. ಯಾವುದೇ ಬಂಕ್‌ಗಳಲ್ಲಿ ನೀರಿನ ಸೌಲಭ್ಯವಿಲ್ಲದಿದ್ದರೆ ದೂರು ನೀಡಬಹುದು.
2. ಶೌಚಾಲಯ:
ಪೆಟ್ರೋಲ್ ಬಂಕ್ ಮಾಲೀಕರು ಸ್ವಚ್ಛ ಭಾರತ್ ಕಾರ್ಯಕ್ರಮದ ಅಂಗವಾಗಿ ಮೂತ್ರಾಲಯಗಳು ಮತ್ತು ಶೌಚಾಲಯಗಳನ್ನು ನಿರ್ವಹಿಸಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರವೂ ಈ ಕುರಿತು ನಿರ್ದೇಶನ ನೀಡಿದೆ. ಇನ್ನೊಂದು ವಿಷಯವೆಂದರೆ ಶೌಚಾಲಯ ಹಾಗೂ ಶೌಚಾಲಯ ನಿರ್ವಹಣೆಗೆಂದು ಬಂಕ್ ಮಾಲೀಕರಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಸುಮಾರು 4 ರಿಂದ 8 ಪೈಸೆ ನೀಡುತ್ತಿದ್ದೇವೆ.
3. ಪೆಟ್ರೋಲ್, ಡೀಸೆಲ್ ಗುಣಮಟ್ಟ:
ವಿಶೇಷವಾಗಿ ಬಂಕ್ ಗಳಲ್ಲಿ ಪೆಟ್ರೋಲ್, ಡೀಸೆಲ್ ಕಲಬೆರಕೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬ ವಾಹನ ಚಾಲಕರು ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಗುಣಮಟ್ಟದ ಮಾನದಂಡಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.
4. ಉಚಿತ ಗಾಳಿ:
ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಅಥವಾ ಇತರ ಯಾವುದೇ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಉಚಿತವಾಗಿ ಗಾಳಿ ತುಂಬಬೇಕು. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಇದನ್ನೂ ಓದಿ; ಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು
5. ಪ್ರಥಮ ಚಿಕಿತ್ಸೆ:
ಗ್ರಾಹಕರಿಗೆ ಯಾವುದೇ ಗಾಯದ ಸಂದರ್ಭದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಥಮ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ಬಂಕ್ ಗಳಲ್ಲಿ ವಿಶೇಷ ಚಿಕಿತ್ಸಾ ಕಿಟ್ ಇಡಬೇಕು.
6. ದೂರವಾಣಿ ಸೌಲಭ್ಯ:
ಬಳಕೆದಾರರು ತುರ್ತು ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಕರೆ ಮಾಡಲು ಪೆಟ್ರೋಲ್ ಬಂಕ್‌ಗಳಲ್ಲಿರುವ ಫೋನ್ ಅನ್ನು ಬಳಸಬಹುದು.