ಬೆಂಗಳೂರು : ದಂತ ವೈದ್ಯನಾಗಿ ಕೆಲಸ ಮಾಡಿಕೊಂಡು ಯುವಕರನ್ನು ಐಸಿಸ್ ಗೆ ಸೇರುವಂತೆ ಪ್ರಚೋದಿಸುತ್ತಿದ್ದ ಉಗ್ರನನ್ನು ಬಂಧಿಸಲಾಗಿದೆ.
ಮೊಹಮ್ಮದ್ ತಾಕೀರ್ ಎಂಬ ಕಿರಾತಕ ಉಗ್ರ ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದಲ್ಲಿ ದಂತ ವೈದ್ಯನಾಗಿ ಕೆಲಸ ಮಾಡಿಕೊಂಡು ವಾಸವಾಗಿದ್ದ. ತಾಕೀರ್ ವಿದ್ಯಾವಂತ ಯುವಕರನ್ನೇ ಗುರಿಯಾಗಿಸಿಕೊಂಡು ಅವರಿಗೆ ಸಿರಿಯಾದಲ್ಲಿ ನಡೆಯುತ್ತಿದ್ದಂತಹ ಅಮೇರಿಕ ಮತ್ತು ಐಸಿಸ್ ವಾರ್ ನ ಪ್ರಚೋದನಕಾರಿ ವಿಡಿಯೋ ತೋರಿಸಿ ಅವರನ್ನು ತನ್ನೆಡೆಗೆ ಸೆಳೆದುಕೊಂಡು ಐಸಿಸ್ ಗೆ ಸೇರಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬೆಂಗಳೂರಿನಿಂದ ದೆಹಲಿ ಹಾಗೂ ದೆಹಲಿಯಿಂದ ಸಿರಿಯಾಗೇ ತೆರಳುವಂತಹ ಯುವಕರನ್ನು ಗುರಿಯಾಗಿಸಿಕೊಂಡು ಅವರಿಗೆ ನೆರವು ನೀಡುವ ಹಾಗೆ ನಾಟಕ ಮಾಡಿ ಅವರನ್ನು ತನ್ನೆಡೆಗೆ ಸೆಳೆದುಕೊಂಡು ಅವರನ್ನು ಐಸಿಸ್ ಗೆ ಸೇರುವಂತೆ ಪ್ರಚೋದಿಸುತ್ತಿದ್ದ ದೇಶದ ನಾನಾಕಡೆ ಈತ ಸಂಪರ್ಕವನ್ನು ಹೊಂದಿದ್ದ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಈತನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದರೂ ಇವನ ಬಗ್ಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಆದರೆ ಖಚಿತ ಮಾಹಿತಿಯ ಆಧಾರದ ಮೇಲೆ ದೆಹಲಿಯಲ್ಲಿ ಈತನನ್ನು ಬಂಧಿಸಲಾಗಿದೆ.