ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಳೆದ ವಷ೯ ಜುಲೈ 26 ರಂದು ಬಿಜೆಪಿ ಯುವಮೋಚಾ೯ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಕಾಯಾ೯ಚರಣೆ ವೇಳೆ ಮಹತ್ವದ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ; ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ
ಹತ್ಯೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಆರೋಪಿಗಳ ಸಂಬಂಧಿಕರ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್.ಐಎ) ತಪಾಸಣೆ ಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಸೋಮವಾರಪೇಟೆಯಲ್ಲಿನ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೌಶಾದ್ ಅವರುಗಳ ಮನೆಯಲ್ಲಿ ಕೆಲವು ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಈಡಿ | 27-06-2023
- ಎನ್.ಆರ್.ಪುರ/ಕೊಪ್ಪ; ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಕಾರು
- ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ
ಇದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಈ ಮೂವರೂ ನೆರವು ನೀಡಿದ್ದಾರೆ ಎನ್ನಲು ಬಲವಾದ ಸಾಕ್ಷ್ಯಗಳೂ ದೊರಕಿದೆ. ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳಲ್ಲಿ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಕೂಡ ಇದ್ದಾರೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸೀರ್, ರೆಹಮಾನ್ ಸೇರಿದಂತೆ ಈವರೆಗೆ 22 ಮಂದಿ ಆರೋಪಿಗಳ ವಿರುದ್ದ ಎನ್.ಐ.ಎ ಚಾಚ್೯ ಶೀಟ್ ದಾಖಲಿಸಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ
ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆಯ ಚೆನ್ನಪುರ ರಸ್ತೆಯಲ್ಲಿರುವ ಪರಿಸರವಾದಿ ಪ್ರದೀಪ್ ಗೌಡ ಅವರ ಮನೆಯಲ್ಲಿ ನಡೆದಿದೆ.
ಇದನ್ನೂ ಓದಿ; ನರಸಿಂಹರಾಜಪುರ: ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲ; ಶಾಸಕ ಟಿ.ಡಿ ರಾಜೇಗೌಡ ತರಾಟೆ
ಮನೆಯಲ್ಲಿ ಯಾರು ಇಲ್ಲದ ವೇಳೆ ಕಿರಾತಕರು ಕಳ್ಳತನ ಮಾಡಿದ್ದು, 50 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಒಂದು ಲ್ಯಾಪ್ ಟಾಪ್ ಸೇರಿದಂತೆ 1 ಲಕ್ಷದ 20 ಸಾವಿರ ಹಣವನ್ನು ಕಳ್ಳರು ದೋಚಿದ್ದಾರೆ.
ಇನ್ನು ಈ ಬಗ್ಗೆ ಚಿಕ್ಕಮಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.