Sunday, June 4, 2023
Homeರಾಜ್ಯಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾನ್‌ಸ್ಟೇಬಲ್‌ ಬಂಧನ,

ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾನ್‌ಸ್ಟೇಬಲ್‌ ಬಂಧನ,

ಯಾದಗಿರಿ: ಮಹಿಳೆಯ ಜೊತೆ ಅಕ್ರಮ ಸಂಬoಧ ಹೊಂದಿದ್ದ ಆರೋಪದ ಮೇಲೆ ಮೀಸಲು ಪಡೆಯ ಕಾನ್‌ಸ್ಟೇಬಲ್‌ನನ್ನು ಮಹಿಳೆಯ ಕಡೆಯವರು ಕೈ, ಕಾಲು ಕಟ್ಟಿ ಥಳಿಸಿದ್ದಾರೆ.

ನಗರ ಹೊರವಲಯದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದದ್ದು, ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

‘ಒಂದು ವರ್ಷದಿಂದ ಮಹಿಳೆಯ ಜೊತೆ ಅಕ್ರಮ ಸಂಬoಧವನ್ನು ಇಟ್ಟುಕೊಂಡಿದ್ದ ಕಾನ್‌ಸ್ಟೇಬಲ್ ಹಲವಾರು ಬಾರಿ ಮಹಿಳೆ ಕಡೆಯವರು ಬುದ್ದಿವಾದವನ್ನು ಹೇಳಿದರೂ ಕೇಳಿಲ್ಲ. ಇದರಿಂದ ರೋಸಿ ಹೋದ ಅವರು ಬುಧವಾರ ಮನೆಯ ಕಡೆ ಬಂದಾಗ ಬಟ್ಟೆಯಿಂದ ಕೈ, ಕಾಲನ್ನು ಕಟ್ಟಿ ಥಳಿಸಿದ್ದಾರೆ. ಮಹಿಳೆಗೆ ಸಾಲವನ್ನು ಕೊಡಿಸಿದ್ದ. ಮಹಿಳೆಗೆ ಮಕ್ಕಳು ಇದ್ದಾರೆ. ಕಾನ್ ಸ್ಟೆಬಲ್ ಅವಿವಾಹಿತ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಹಿಳೆ ದೂರು ನೀಡಿದ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಗೆ ಸಂಬoಧಿಸಿದoತೆ ತನಿಖೆಯು ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

Most Popular

Recent Comments