Sunday, September 24, 2023
Homeಮಲೆನಾಡುಚಿಕ್ಕಮಗಳೂರುಕಾಫಿನಾಡು ಚುನಾವಣಾಧಿಕಾರಿಗಳಿಂದ ಭರ್ಜರಿ ಬೇಟೆ; ಒಂದೆ ದಿನದಲ್ಲಿ 5 ಕಡೆಗಳಲ್ಲಿ ಅಕ್ರಮ ಹಣ ಹಾಗೂ ಸೀರೆ...

ಕಾಫಿನಾಡು ಚುನಾವಣಾಧಿಕಾರಿಗಳಿಂದ ಭರ್ಜರಿ ಬೇಟೆ; ಒಂದೆ ದಿನದಲ್ಲಿ 5 ಕಡೆಗಳಲ್ಲಿ ಅಕ್ರಮ ಹಣ ಹಾಗೂ ಸೀರೆ ವಶಕ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸುತ್ತಿದೆ. ಈವರೆಗೂ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನು ಓದಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ ಸ್ಪೆಕ್ಟರ್

ಅಕ್ರಮದ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಂದು ಒಂದೆ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ 5 ಕಡೆಗಳಲ್ಲಿ ಅಕ್ರಮ ಹಣ ಹಾಗೂ ಸೀರೆ ಹಾಗೂ ಇನ್ನಿತರ ವಶಪಡಿಸಿಕೊಳ್ಳಲಾಗಿದೆ.

ಇದನ್ನು ಓದಿ: ಮೊದಲ ಹಂತದಲ್ಲಿ 189 ಜನರ ಪಟ್ಟಿ ಘೋಷಿಸಿದ ಬಿಜೆಪಿ!

ಸಫ್ರೈಸ್ ಚೆಕ್ ಪೋಸ್ಟ್ ಬಳಿ 6,82,500 ರೂ ಹಣ ವಶಕ್ಕೆ:
ಚಿಕ್ಕಮಗಳೂರು ಜಿಲ್ಲೆಯ ಸೋಮನಹಳ್ಳಿ ಮತ್ತು ಎರೆಹಳ್ಳಿ ಮಧ್ಯೆ ಇರುವ ಸಫ್ರೈಸ್ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 6,82,500 ರೂ ಹಣವನ್ನು ವಶ ಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಸೋಮನಹಳ್ಳಿ ಮತ್ತು ಎರೆಹಳ್ಳಿ ಮಧ್ಯೆ ಇರುವ ಸಫ್ರೈಸ್ ಚೆಕ್ ಪೋಸ್ಟ್ ಬಳಿ ನಡೆದಿದೆ.

ಎಂ.ಸಿ.ಹಳ್ಳಿ ಚೆಕ್ ಪೋಸ್ಟ್ ಬಳಿ 3,40,000 ನಗದು ವಶಕ್ಕೆ:
ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 3,40,000 ರೂ ನಗದನ್ನ ವಶ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.


ಈ ಉಪಯುಕ್ತ ಮಾಹಿತಿಗಳನ್ನೂ ಓದಿರಿ:


ಲಕ್ಕವಳ್ಳಿ ಎಂ.ಎನ್. ಕ್ಯಾಂಪ್ ಚೆಕ್ ಪೋಸ್ಟ್ ಬಳಿ 1,00,000 ನಗದು ವಶಕ್ಕೆ:
ಲಕ್ಕವಳ್ಳಿ ಎಂ.ಎನ್. ಕ್ಯಾಂಪ್ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,00,000 ಹಣವನ್ನು ಸೀಜ್ ಮಾಡಿದ್ದಾರೆ.

ಕುಕ್ಕರ್ ಹಾಗೂ ಸೀರೆ ವಶಕ್ಕೆ:
ಬೀರೂರು ಗೌರಿ ಟ್ರಾನ್ಸ್ ಪೋರ್ಟ್ ನಲ್ಲಿ ಬಿಲ್ ಇಲ್ಲದೇ ಇರುವ 68,500 ರೂ. ಮೌಲ್ಯದ 47 ಕುಕ್ಕರ್ ಹಾಗೂ 77 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡೆಲಿವರಿ ಕೊರಿಯರ್ ನಲ್ಲಿ ಜೀನ್ಸ್ ಪ್ಯಾಂಟ್ ವಶಕ್ಕೆ:
ಚಿಕ್ಕಮಗಳೂರು ನಗರದಲ್ಲಿ ಡೆಲಿವರಿ ಕೊರಿಯರ್ ನಲ್ಲಿ 7,50,000 ರೂ. ಮೌಲ್ಯದ 760 ಜೀನ್ಸ್ ಪ್ಯಾಂಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನು ಓದಿ: ಕಾರಿನ ಮೇಲೆ ಬೋರ್‌ವೆಲ್ ಲಾರಿ ಪಲ್ಟಿ; ಕಾರು ಚಾಲಕ ಸಾವು

Most Popular

Recent Comments