ಕಲಬುರಗಿ: ದನ, ಎಮ್ಮೆ, ಕುರಿಗಳ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ನಡೆದಿದೆ.
ಸ್ಥಳೀಯ ನಂದಿ ಏನಿಮಲ್ ವೆಲ್ ಫೆರ್ ಸೊಸೈಟಿ ಯ ಅಧ್ಯಕ್ಷ ಕೇಶವ್ ಮೋಟಗಿಯವರು ನೀಡಿದ್ದ ಮಾಹಿತಿಯ ಮೇರೆಗೆ ದಾಳಿಯನ್ನು ನಡೆಸಿದ್ದಾರೆ.
ದಾಳಿಯ ವೇಳೆ ಗಾಡಿಯಲ್ಲಿ ಸಾಗಾಟ ಮಾಡುತ್ತಿದ್ದ 9 ಟನ್ ಗೋವು, ಎಮ್ಮೆ, ಕುರಿಗಳ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಾಣಿಗಳ ಚರ್ಮಗಳನ್ನು ವಶಪಡಿಸಿಕೊಂಡ ಪೊಲೀಸರು ಲಾರಿ, ಚಾಲಕ, ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದಿದ್ದಾರೆ.