ಚಿಕ್ಕಮಗಳೂರು; ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಮುಂದಾಗಿದ್ದು , ಇದೀಗ ಹ್ಯುಂಡೈ ಹೊಸ ಎಕ್ಸ್ಟರ್ ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -7760645544)
ಇದನ್ನೂ ಓದಿ; charmadi ghat: ಮೂಡಿಗೆರೆ: ಸೌಂದರ್ಯ ವೀಕ್ಷಣೆ ನೆಪದಲ್ಲಿ ಸಂಚಾರಕ್ಕೆ ಅಡ್ಡಿ
ಹ್ಯುಂಡೈ ಮೋಟಾರ್ ಇಂಡಿಯಾ ಇಂದು ಎಕ್ಸ್ಟರ್ ಅನ್ನು ರೂ 5.99 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಸಬ್-4-ಮೀಟರ್ ಮಿನಿ ಎಸ್‌ಯುವಿ ವಿಭಾಗದಲ್ಲಿ ಇದು ಭಾರತದಲ್ಲಿ ಅಗ್ಗದ ಮತ್ತು ಮೊದಲ ಕಾರು ಎಂದು ಕಂಪನಿ ಹೇಳಿದೆ. ಅದರ ಎಲ್ಲಾ ರೂಪಾಂತರಗಳಲ್ಲಿ 6 ಏರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಈ ಕಾರು ಟಾಟಾ ಪಂಚ್‌ಗೆ ಪೈಪೋಟಿ ನೀಡಲಿದೆ.
ಇದನ್ನೂ ಓದಿ; cricket betting: ಬೆಟ್ಟಿಂಗ್ ದಂಧೆಗೆ ಕ್ರಿಕೆಟ್ ಕ್ರೀಡಾಪಟು ಬಲಿ
ಎಕ್ಸ್ ಟರ್‌ನ ಉನ್ನತ ರೂಪಾಂತರದಲ್ಲಿ 40+ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಇತರ ರೂಪಾಂತರಗಳಲ್ಲಿ 26 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು ಡ್ಯುಯಲ್ ಡ್ಯಾಶ್ ಕ್ಯಾಮ್‌ಗಳೊಂದಿಗೆ 60+ ಬ್ಲೂ ಲಿಂಕ್ ಸಂಪರ್ಕಿತ ವೈಶಿಷ್ಟ್ಯಗಳನ್ನು ಮತ್ತು ಮನೆಯಿಂದ ಕಾರ್ ಅಲೆಕ್ಸಾ ಬೆಂಬಲಿಸುವ ಇಂಗ್ಲೀಷ್ ಧ್ವನಿ ಆಜ್ಞೆಗಳನ್ನು ಸಹ ಪಡೆಯುತ್ತದೆ.
ಹ್ಯುಂಡೈ ಎಕ್ಸ್ಟರ್ ಬೆಲೆಗಳು:
* ಹ್ಯುಂಡೈ ಎಕ್ಸ್ಟರ್ EX (ಮಾನ್ಯುಯೆಲ್) : 5,99,900 ರೂಪಾಯಿ(ಎಕ್ಸ್ ಶೋ ರೂಂ)
* ಹ್ಯುಂಡೈ ಎಕ್ಸ್ಟರ್ S (ಮಾನ್ಯುಯೆಲ್) : 7,26,990 ರೂಪಾಯಿ(ಎಕ್ಸ್ ಶೋ ರೂಂ)
* ಹ್ಯುಂಡೈ ಎಕ್ಸ್ಟರ್ SX (ಮಾನ್ಯುಯೆಲ್) : 7,99,990 ರೂಪಾಯಿ(ಎಕ್ಸ್ ಶೋ ರೂಂ)
* ಹ್ಯುಂಡೈ ಎಕ್ಸ್ಟರ್ SX(O)(ಮಾನ್ಯುಯೆಲ್) : 8,63,990 ರೂಪಾಯಿ(ಎಕ್ಸ್ ಶೋ ರೂಂ)
* ಹ್ಯುಂಡೈ ಎಕ್ಸ್ಟರ್ SX(O) ಕನೆಕ್ಟ್(ಮಾನ್ಯುಯೆಲ್): 9,31,990 ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಎಕ್ಸ್ಟರ್ ಆಟೋಮ್ಯಾಟಿಕ್ ವೇರಿಯೆಂಟ್ ಕಾರಿನ ಬೆಲೆ 7,96,980 ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದರೆ, CNG ವೇರಿಯೆಂಟ್ ಬೆಲೆ 8,23,990 ರೂಪಾಯಿ(ಎಕ್ಸ್ ಶೋರೂಂ)ಆರಂಭಗೊಳ್ಳುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- internet problem: ಕೊಟ್ಟಿಗೆಹಾರ: ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 10.07.2023
- ಮಿಸ್ ಕಾಲ್ ಮಾಡಿ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲಿಸಿ ಎಂಬ ವೈರಲ್ ಸಂದೇಶದ ಸತ್ಯಾಸತ್ಯತೆ ಏನು?
ಹ್ಯುಂಡೈ ಎಕ್ಸ್ಟರ್ ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್ ಹೊಂದಿದೆ. ವಿಶೇಷವಾಗಿ ಹೆಚ್ ಶೇಪ್ ಡೇ ಟೈಮ್ ರನ್ನಿಂಗ್ ಲೈಟ್ಸ್, LEDS ಪ್ರಾಜೆಕ್ಟರ್ ಸೇರಿದಂತೆ ಹಲವು ಹೊಸತನಗಳ ಡಿಸೈನ್ ಇಲ್ಲಿದೆ. ಅತ್ಯಾಕರ್ಷ ಡಿಸೈನ್ ಹೊಂದಿರುವ ನೂತನ ಎಕ್ಸ್ಟರ್ ನೋಟದಲ್ಲಿ ಮೈಕ್ರೋಗಿಂತ ದೊಡ್ಡ ಗಾತ್ರದಲ್ಲಿ ಕಾಣಿಸುತ್ತಿದೆ. ಸಣ್ಣ ಕಾರಾಗಿದ್ದರೂ ಇದರಲ್ಲಿ ಅತ್ಯುತ್ತಮ ಸ್ಥಳಾವಕಾಶವಿದೆ.
ಇದನ್ನೂ ಓದಿ; ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳ ಸೆರೆ
1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ ಕಾರು, 5 ಸ್ಪೀಡ್ ಮಾನ್ಯುಯೆಲ್, ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹಾಗೂ ಸಿಎನ್‌ಜಿ ವೇರಿಯೆಂಟ್ ಆಯ್ಕೆಯೂ ಲಭ್ಯವಿದೆ. ನೂನತ ಕಾರು 81.86BHPಪವರ್ ಹಾಗೂ 113.8 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಪರ್ಫಾಮೆನ್ಸ್, ಪಿಕ್‌ಅಪ್ ಕೂಡ ಉತ್ತಮವಾಗಿದೆ. ಸಿಎನ್‌ಜಿ ವೇರಿಯೆಂಟ್ ಕಾರು 68BHP ಪವರ್ ಹಾಗೂ 95.2 NM ಪೀಕ್ ಟಾರ್ಕ್ ಉತ್ಪಾದಿಸಲಿದೆ.
(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -7760645544)
ಹ್ಯುಂಡೈ ಪೆಟ್ರೋಲ್ ಮ್ಯಾನ್ಯುಯೆಲ್ ಎಂಜಿನ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.4 ಕಿ.ಮೀ ಮೈಲೇಜ್ ನೀಡಲಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಕಾರು 19.2 ಕಿಲೋಮೀಟರ್ ಹಾಗೂ ಸಿಎನ್‌ಜಿ ವೇರಿಯೆಂಟ್ ಕಾರು 27.1 ಕಿಲೋಮೀಟರ್ ಮೈಲೇಜ್ ನೀಡಲಿದೆ.
9 ಬಣ್ಣಗಳಲ್ಲಿ ಲಭ್ಯ:
ಹುಂಡೈ ಎಕ್ಸ್ಟರ್ ಒಟ್ಟು 9 ಬಣ್ಣಗಳಲ್ಲಿ ಲಭ್ಯವಿದೆ. 6 ಮೊನೊಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದೆ. ಕಾಸ್ಮಿಕ್ ಬ್ಲೂ, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ಕಾಸ್ಮಿಕ್ ಬ್ಲೂ ಮತ್ತು ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ರೇಂಜರ್ ಖಾಕಿ. ಹುಂಡೈ ಎಕ್ಸ್ಟರ್ ನ ಒಳಭಾಗವು ಲೈಟ್ ಸೇಜ್, ಕಾಸ್ಮಿಕ್ ನೀಲಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ; ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು
11 ಸಾವಿರಕ್ಕೂ ಹೆಚ್ಚು ಅಡ್ವಾನ್ಸ್ ಬುಕಿಂಗ್;
ಮಾರುಕಟ್ಟೆಗೆ ಬರುವ ಮುನ್ನವೇ ಹ್ಯುಂಡೈ ಎಕ್ಸಟೈರ್ ಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ 11 ಸಾವಿರಕ್ಕೂ ಹೆಚ್ಚು ಬುಕಿಂಗ್ ಸ್ವೀಕರಿಸಿರುವುದಾಗಿ ಕಂಪನಿ ಹೇಳಿದೆ.