Saturday, December 9, 2023
Homeಬಯಲುಸೀಮೆಕೇಂದ್ರ ಸಚಿವ ಜೋಶಿ ಮಗಳ ಮದುವೆಯ ಪ್ರಯುಕ್ತ ಡಾಂಬರ್ ಕಂಡ ರಸ್ತೆಗಳು - ಆಕ್ರೋಶವನ್ನು ವ್ಯಕ್ತ...

ಕೇಂದ್ರ ಸಚಿವ ಜೋಶಿ ಮಗಳ ಮದುವೆಯ ಪ್ರಯುಕ್ತ ಡಾಂಬರ್ ಕಂಡ ರಸ್ತೆಗಳು – ಆಕ್ರೋಶವನ್ನು ವ್ಯಕ್ತ ಪಡಿಸಿದ ಜನರು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮಗಳ ವಿವಾಹ ಕಾರ್ಯಕ್ರಮವು ಸೆಪ್ಟೆಂಬರ್ 2 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವರು ಸೇರಿದಂತೆ ಹಲವಾರು ಬಿಜೆಪಿ ನಾಯಕರು ಆಗಮಿಸುತ್ತಿದ್ದಾರೆ. ಇದರಿಂದ ಹಲವಾರು ವರ್ಷಗಳಿಂದ ಡಾಂಬರ್ ಕಾಣದೇ ಇದ್ದ ರಸ್ತೆಗಳ ದುರಸ್ತಿಗೆ ಮಹಾನಗರ ಪಾಲಿಕೆ ಮುಂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮಗಳ ಮದುವೆಯಿರುವ ಹಿನ್ನೆಲೆಯಲ್ಲಿ ಕೇಂದ್ರದ ಹಲವಾರು ಮಂತ್ರಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕೊನೆಗೂ ರಸ್ತೆಗುಂಡಿಗಳನ್ನು ಮುಚ್ಚಲು ರಾಷ್ಟ್ರೀಯ ನಾಯಕರೇ ಬರಬೇಕಾಯಿತಾ ಎಂದು ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಹೆಸರಿಗೆ ಮಾತ್ರವೇ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಆದರೆ ನಗರದ ಬಹುತೇಕ ರಸ್ತೆಗಳು ಹೊಂಡ ಮಯವಾಗಿವೆ. ಇದರಿಂದ ದಿನ ನಿತ್ಯ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಈ ಕುರಿತು ಅವಳಿನಗರದ ಜನರು ಡಾಂಬರೀಕರಣ ಇರಲಿ ತಗ್ಗು – ಗುಂಡಿಗಳನ್ನಾದರು ಮುಚ್ಚಲಿ ಎಂದು ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ವಿನಂತಿಸಿಕೊoಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎಂಬoತೆ ವರ್ತಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮಗಳ ವಿವಾಹ ಕಾರ್ಯಕ್ರಮ ಸೆಪ್ಟೆಂಬರ್ 2 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವರಾಗಿರುವಂತಹ ಅಮಿತ್ ಶಾ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಅನೇಕ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು, ಮದುವೆ ನಡೆಯುವ ಖಾಸಗಿ ಹೋಟೆಲ್ ನ ಮುಖ್ಯ ರಸ್ತೆಗೆ ಮರು ಡಾಂಬರೀಕರಣ ಮಾಡಲು ಮುಂದಾಗಿದ್ದಾರಲ್ಲದೇ, ಮಹಾನಗರದ ಕೆಲ ರಸ್ತೆಗಳ ತಗ್ಗು – ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶಗೊಂಡು, ರಸ್ತೆಯಲ್ಲಿರುವಂತಹ ಗುಂಡಿಗಳನ್ನು ಮುಚ್ಚಲು ರಾಷ್ಟ್ರೀಯ ನಾಯಕರೇ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.

Most Popular

Recent Comments