Wednesday, November 29, 2023
Homeಮಲೆನಾಡುಚಿಕ್ಕಮಗಳೂರುಜಯಪುರ: ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ; ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು

ಜಯಪುರ: ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ; ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ ಗುಣಮಟ್ಟದ್ದಾಗಿದೆ ಎಂದು ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು ನೀಡಿದ್ದು ಈ ಸಂಬಂಧ ಉತ್ಪನ್ನದ ಮಾದರಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಬುಧವಾರ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ; ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ

ಚಿಕ್ಕಮಗಳೂರು ಜಿಲ್ಲೆಯ ಜಯಪುರದ ಮೇಗುಂದಾ ಹೋಬಳಿ ವ್ಯಾಪ್ತಿಯ ಹೇರೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀಡಿರುವ ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘುಪೋಷಕಾಂಶ ಕಳಪೆ ಗುಣಮಟ್ಟದ್ದಾಗಿದೆ. ಪೊಟ್ಯಾಷ್ ರಸಗೊಬ್ಬರಕ್ಕೆ ಈಗ ಬೇಡಿಕೆ ಜಾಸ್ತಿಯಿದ್ದು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಂಪನಿ, ಪಾಲಿಹೈಲೆಟ್ ಲಘುಪೋಷಕಾಂಶವನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡುತ್ತಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ 15 ಟನ್ ರಸಗೊಬ್ಬರದೊಂದಿಗೆ 2 ಟನ್ ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶವನ್ನು ಕಡ್ಡಾಯವಾಗಿಕೊಳ್ಳಬೇಕು ಇಲ್ಲದಿದ್ದರೆ ಪೊಟ್ಯಾಷ್ ರಸಗೊಬ್ಬರ ನೀಡವುದಿಲ್ಲ ಎಂಬ ಶರತ್ತು ವಿಧಿಸುತ್ತಿದೆ. ಈ ಕಾರಣದಿಂದ ರಸಗೊಬ್ಬರ ಮಾರಾಟಗಾರರು ಅನಿವಾರ್ಯವಾಗಿ ರೈತರಿಗೆ ಲಘುಪೋಷಕಾಂಶದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ರೈತರು ಅನಗತ್ಯ ಉತ್ಪನ್ನ ಖರೀದಿಯ ಮರ್ಜಿಗೆ ಬಿದ್ದಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ

ಈ ಉತ್ಪನ್ನ ಕಳಪೆಯಾಗಿದ್ದು, ನೀರಿನಲ್ಲಿ ಕರಗುತ್ತಿಲ್ಲ ಎಂದು ಹೇರೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಉತ್ಪನ್ನದ ಗುಣಮಟ್ಟ ಪರೀಕ್ಷೆಯ ನಂತರ ಉತ್ಪನ್ನದ ಅಸಲಿಯತ್ತು ಗೊತ್ತಾಗಲಿದ್ದು, ಪೊಟ್ಯಾಷ್ ನೊಂದಿಗೆ ನಿಯಮ ಭಾಹಿರವಾಗಿ ಇತರೆ ಉತ್ಪನ್ ಖರೀದಿಸಬೇಕೆನ್ನುವ ರಸಗೊಬ್ಬರ ಕಂಪನಿಯ ತಂತ್ರಕ್ಕೆ ಬ್ರೇಕ್ ಬೀಳಬೇಕಿದೆ.

ಇನ್ನು ಈ ಬಗ್ಗೆ ನಟೇಶ್ ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ, ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆಯಾಗಿದೆ ಹಾಗೂ ಇದನ್ನು ಐಪಿಎಲ್ ರಸಗೊಬ್ಬರ ಕಂಪನಿ ಒತ್ತಾಯ ಪೂರ್ವಕವಾಗಿ ಮಾರಾಟ ಮಾಡುತ್ತಿದೆ ಎಂದು ಹೇರೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ದೂರು ನೀಡಿದ್ದು, ದೂರನ್ನಾಧರಿಸಿ ಮಾದರಿ ಸಂಗ್ರಹಿಸಿದ್ದೇವೆ. ಮಾದರಿಯನ್ನು ಮಂಡ್ಯದ ರಸಗೊಬ್ಬರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತೇವೆ ಮತ್ತು ಐಪಿಎಲ್ ಕಂಪನಿಗೆ ನೋಟೀಸ್ ನೀಡುತ್ತೇನೆ ಎಂದರು.

ಇದನ್ನೂ ಓದಿ; ನರಸಿಂಹರಾಜಪುರ: ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲ; ಶಾಸಕ ಟಿ.ಡಿ ರಾಜೇಗೌಡ ತರಾಟೆ

ಕುಕ್ಕುಡಿಗೆ ರವಿಂದ್ರ ಮಾತನಾಡಿ, ಐಪಿಎಲ್ ಕಂಪನಿ ಪೊಟ್ಯಾಷ್ ಗೊಬ್ಬರದೊಂದಿಗೆ ಲಘು ಪೋಷಕಾಂಶದ ಉತ್ಪನ್ನವನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡುತ್ತಿದೆ. ಇದು ಕಾನೂನು ಬಾಹಿರ ಕ್ರಮ ವಾಗಿದೆ. ಅಲ್ಲದೆ ಈ ಉತ್ಪನ್. ನೀರಿನಲ್ಲಿ ಕರಗದ ಕಾರಣ ಕಳಪೆ ಎಂಬ ಅನುಮಾನ ಮೂಡಿದೆ. ರೈತರು ನಮಗೆ ಬೇಕಾದ ಉತ್ಪನ್ನವನ್ನು ಖರೀದಿ ಮಾಡುವಂತಾಗ ಬೇಕು, ಕೂಡಲೇ ಸಂಭಂದ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

Most Popular

Recent Comments