ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟ್ಟರ್(Twitter) ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಬಳಿಕ ಮೆಟಾ ಒಡೆತನದ ಫೇಸ್ ಬುಕ್(Facebook), ಇನ್‌ಸ್ಟಾಗ್ರಾಮ್ (Instagram) ನಂತಹ ಇತರೆ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿದೆ. ಹೊಸ ಹೊಸ ಫೀಚರ್ ಗಳಿಂದ ಹಿಡಿದು ಉದ್ಯೋಗಿಗಳ ವಜಾದ ವರೆಗೆ ಅನೇಕ ಕಂಪನಿಗಳು ಟ್ವಿಟ್ಟರ್ ದಾರಿಯನ್ನೇ ಹಿಡಿಯುತ್ತಿದೆ. ಇದರಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಬ್ಲೂ ಟಿಕ್(blue tick) ಚಂದಾದಾರಿಕೆ.
ಇದನ್ನೂ ಓದಿ; ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆ
ಇದನ್ನೂ ಓದಿ; ಉಚಿತ ವಿದ್ಯುತ್ ಯೋಜನೆಯನ್ನು ಪಡೆಯಲು ಏನು ಮಾಡಬೇಕು?
ಜೂನ್ 7 ರಂದು ಭಾರತಕ್ಕೆ ಪರಿಶೀಲಿಸಿದ ಸೇವೆಗಳನ್ನು ವಿಸ್ತರಿಸಲು ಮೆಟಾ ಘೋಷಿಸಿತು. ಇದು ಬಳಕೆದಾರರು ತಮ್ಮ Facebook ಮತ್ತು Instagram, Twitter ಖಾತೆಗಳಿಗಾಗಿ ದೇಶದಲ್ಲಿ ಪರಿಶೀಲಿಸಿದ ಬ್ಯಾಡ್ಜ್ ಗಳನ್ನು ಪಡೆಯಲು ಅನುಮತಿಸುತ್ತದೆ. ಬಳಕೆದಾರರು ಮೆಟಾ ವೆರಿಫೈಡ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ ಅದು ಅವರಿಗೆ ನೀಲಿ ಟಿಕ್ ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
Instagram, Twitter, Facebook ನಲ್ಲಿ ಬ್ಲೂ ಟಿಕ್ ಅರ್ಥವೇನು?:
Blue tick ಪರಿಶೀಲನೆಯು ಖಾತೆಯು ಅಧಿಕೃತವಾಗಿದೆ ಮತ್ತು ಬ್ರ‍್ಯಾಂಡ್‌ನ ಅಧಿಕೃತ ಹ್ಯಾಂಡಲ್ ಆಗಿದೆ ಎಂಬುದಕ್ಕೆ ಪುರಾವೆಯಾಗಿದೆ. ಟಿಕ್‌ಗಳು ಕೇವಲ ಇನ್‌ಸ್ಟಾಗ್ರಾಮ್‌ಗೆ ಸೀಮಿತವಾಗಿಲ್ಲ ಅಂದರೆ ಟ್ವಿಟರ್, ಫೇಸ್‌ಬುಕ್ ಮತ್ತು ಅಂತಹ ಅನೇಕ ಪ್ಲಾಟ್‌ಫಾರ್ಮ್ಗಳಲ್ಲಿ ಬ್ರ‍್ಯಾಂಡ್‌ಗಳಿಗೆ ಹಸ್ತಾಂತರಿಸಲ್ಪಡುತ್ತವೆ.
ಇದನ್ನೂ ಓದಿ; ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ಲ; ಫೋಟೋವನ್ನು ಬದಲಾಯಿಸಬಹುದು ಹೇಗೆ ಗೊತ್ತಾ?
Blue tick ಇದರಿಂದ ಏನು ಪ್ರಯೋಜನ?:
* ಮೆಟಾ ವೆರಿಫೈಡ್ ಬಳಕೆದಾರರಿಗೆ ಸರ್ಕಾರಿ ಐಡಿಯನ್ನು ಬಳಸಿಕೊಂಡು ಪರಿಶೀಲನೆಯನ್ನು ಮಾಡಲು ಸಹಾಯ ಮಾಡುತ್ತದೆ.
* ಇದು ಪರಿಶೀಲಿಸಿದ ಬಳಕೆದಾರರಿಗೆ ಪೂರ್ವಭಾವಿ ಖಾತೆ ರಕ್ಷಣೆ ಮಾಡುತ್ತದೆ.
* ಇತರ ವೈಶಿಷ್ಟ್ಯಗಳ ಜೊತೆಗೆ ನೇರ ಖಾತೆ ಬೆಂಬಲಕ್ಕೆ ಪ್ರವೇಶವನ್ನು ಒದಗಿಸುತ್ತದೆ.
Blue tick ಪರಿಶೀಲನೆಗೆ ಯಾರು ಅರ್ಹರು?:
* ಭಾರತದಲ್ಲಿ ಮೆಟಾ ದೃಢೀಕರಣವನ್ನು ಪಡೆಯಲು, ಒಬ್ಬರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
* ಕಂಪನಿಯು ಬಳಕೆದಾರರ ಹಿಂದಿನ ಪೋಸ್ಟ್ ಇತಿಹಾಸವನ್ನು ಪರಿಶೀಲಿಸಬಹುದು.
* ಇವುಗಳ ಜೊತೆಗೆ, ಒಬ್ಬರು ಅಧಿಕೃತ ಸರ್ಕಾರಿ ಐಡಿಯನ್ನು ಹೊಂದಿರಬೇಕು,
* ಹೆಸರು ಮತ್ತು ಫೋಟೋ Instagram ಅಥವಾ Facebook, Twitter ಖಾತೆಯಲ್ಲಿ ಹೊಂದಿಕೆಯಾಗುಬೇಕು.
* ಖಾಸಗಿ ಖಾತೆಗಳು ನೀಲಿ ಟಿಕ್‌ಗೆ ಅರ್ಹತೆ ಹೊಂದಿಲ್ಲ.
* ನಿಮ್ಮ Instagram, Twitter, Facebook ಖಾತೆಯು ಪೂರ್ಣವಾಗಿರಬೇಕು(ಪ್ರೊಫೈಲ್ ಫೋಟೋ, ಸಂಪೂರ್ಣ ಬಯೋ ಮತ್ತು ಕನಿಷ್ಠ ಒಂದು ಪೋಸ್ಟ್ ಅನ್ನು ಹೊಂದಿರಬೇಕು.)
ಇದನ್ನೂ ಓದಿ; ಅಕ್ಕಿ ಸಿಗದಿದ್ದರೆ ಅಕೌಂಟ್‌ಗೆ ಹಣ ಹಾಕಿಬಿಡಿ, ಅವರೇ ಅಕ್ಕಿ ಖರೀದಿಸ್ತಾರೆ.
ಇದನ್ನೂ ಓದಿ; ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?
ಸಾರ್ವಜನಿಕ ವ್ಯಕ್ತಿಗಳು, ಸೆಲೆಬ್ರಿಟಿಗಳು, ವಿಷಯ ರಚನೆಕಾರರು ಅಥವಾ ಬ್ರ‍್ಯಾಂಡ್‌ಗಳು ಖಾತೆ ಮತ್ತು ಅರ್ಹತೆಯ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಪರಿಶೀಲಿಸಿದ ಬ್ಯಾಡ್ಜ್ಗೆ ಅರ್ಜಿ ಸಲ್ಲಿಸಬಹುದು. ಪ್ರಸ್ತುತ, ಮೆಟಾ ವೆರಿಫೈಡ್ ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಭಾರತ ಸೇರಿದಂತೆ ಆಯ್ದ ದೇಶಗಳಲ್ಲಿ ಮಾತ್ರ ಈ ನೀಲಿ ಟಿಕ್ ಎಂಬುವುದು ಲಭ್ಯವಿದೆ.
ಹಾಗಾದರೆ ಇದನ್ನು ಪಡೆಯುವುದು ಹೇಗೆ?:
1. Android ಅಥವಾ ios ಸಾಧನದಲ್ಲಿ Instagram, Twitter ಅಥವಾ Facebook ಅಪ್ಲಿಕೇಶನ್ ತೆರೆಯಿರಿ.
2. ನೀವು ಪರಿಶೀಲಿಸಲು ಬಯಸುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
3. ಸೆಟ್ಟಿಂಗ್‌ಗಳು > ಖಾತೆಗಳ ಕೇಂದ್ರಕ್ಕೆ ಹೋಗಿ.
4. ಮೆಟಾ ವೆರಿಫೈಡ್ ಆಯ್ಕೆಯನ್ನು ಆಯ್ಕೆಮಾಡಿ. (ಇದು ಗೋಚರಿಸದಿದ್ದರೆ, ನಿಮ್ಮ ಅಪ್ಲಿಕೇಶನ್‌ಗಳನ್ನು ನೀವು ಅಪ್‌ಗ್ರೇಡ್ ಮಾಡಬೇಕಾಗಬಹುದು.)
5. ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ.
6. ಸರ್ಕಾರಿ ಐಡಿಯನ್ನು ಬಳಸಿಕೊಂಡು ನಿಮ್ಮನ್ನು ದೃಢೀಕರಿಸಲು ಸೂಚನೆಗಳನ್ನು ಅನುಸರಿಸಿ.
7. ದೃಢೀಕರಣವನ್ನು ಮಾಡಿದ ನಂತರ, ಬಳಕೆದಾರರು ತಮ್ಮ ಖಾತೆಯಲ್ಲಿ ಪರಿಶೀಲಿಸಿದ ಬ್ಯಾಡ್ಜ್ ಅನ್ನು ಪಡೆಯುತ್ತಾರೆ.
ನೀವು ಮೆಟಾ ದೃಢೀಕೃತ ಸೇವೆಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದರೆ, ಈ ಹಂತಗಳನ್ನು ಅನುಸರಿಸಿ:
1. ನಿಮ್ಮ Facebook ಅಥವಾ Instagram ಖಾತೆಯ ಪ್ರೊಫೈಲ್ ವಿಭಾಗದಲ್ಲಿ ನಿಮ್ಮ ‘ಸೆಟ್ಟಿಂಗ್‌ಗಳು’ ಆಯ್ಕೆಗೆ ಹೋಗಿ.
2. ಮುಂದೆ, ‘ಖಾತೆಗಳ ಕೇಂದ್ರ’ ಆಯ್ಕೆಮಾಡಿ ಮತ್ತು ‘ಮೆಟಾ ಪರಿಶೀಲಿಸಲಾಗಿದೆ’ ಆಯ್ಕೆಯನ್ನು ನೋಡಿ.
ಗಮನಿಸಿ: ಅರ್ಹ ಬಳಕೆದಾರರು ಮಾತ್ರ ತಮ್ಮ ಹೆಸರಿನ ಅಡಿಯಲ್ಲಿ ‘ಮೆಟಾ ವೆರಿಫೈಡ್’ ಆಯ್ಕೆಯನ್ನು ಕಂಡುಕೊಳ್ಳುತ್ತಾರೆ.
3. ನೀವು ಅರ್ಹರಾಗಿದ್ದರೆ, ನೀವು ಪರಿಶೀಲಿಸಲು ಬಯಸುವ ಪ್ರೊಫೈಲ್ ಅನ್ನು ಆಯ್ಕೆ ಮಾಡಿ ಮತ್ತು ‘ನಿಮ್ಮ ಗುರುತನ್ನು ದೃಢೀಕರಿಸಿ’ ಟ್ಯಾಪ್ ಮಾಡಿ.
4. ಆದ್ಯತೆಯ ಪಾವತಿ ಆಯ್ಕೆಯನ್ನು ಆರಿಸಿ ಮತ್ತು ಪಾವತಿಯನ್ನು ಮಾಡಿ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ
- ನಿಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಕೊನೆ ದಿನ
- ಪ್ಯಾರ ಮೆಡಿಕಲ್ ಕಾಲೇಜು ಮುಖ್ಯಸ್ಥರಿಂದ ವಿದ್ಯಾರ್ಥಿನಿಗೆ ಹಲ್ಲೆ
ಈ ನೀಲಿ ಟಿಕ್ ಪಡೆಯಲು ತಿಂಗಳ ಶುಲ್ಕ ಎಷ್ಟು?
* ಟ್ವಿಟ್ಟರ್ ಬ್ಲೂ ಟಿಕ್ ಪಡೆದುಕೊಳ್ಳಲು ತಿಂಗಳಿಗೆ 650 ರೂ. ವೆಬ್ ಬಳಕೆದಾರರಿಗೆ, 900 ರೂ. ಮೊಬೈಲ್ ಬಳಕೆದಾರರಿಗೆ ನಿಗದಿ ಮಾಡಲಾಗಿದೆ. ಅಂತೆಯೆ ವರ್ಷಕ್ಕೆ 6,800 ರೂ. ಪಾವತಿಸಬೇಕು.
* ಫೇಸ್ ಬುಕ್ ಬ್ಲೂ ಟಿಕ್ ಪಡೆದುಕೊಳ್ಳಲು ಮೆಟಾ ವೆರಫೈಡ್ ಪ್ರತಿ ತಿಂಗಳಿಗೆ 699 ರೂ. ನಿಗದಿ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ ವೆಬ್ ಬಳಕೆದಾರರಿಗೆ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದು 599 ರೂ. ಮಾಸಿಕ ಶುಲ್ಕ ಇರಲಿದೆ ಎಂದು ಕಂಪನಿಯು ಘೋಷಿಸಿದೆ.
* ಇನ್ ಸ್ಟಾಗ್ರಾಮ್ ನಲ್ಲಿ ಬ್ಲೂ ಟಿಕ್ ಪಡೆದುಕೊಳ್ಳಲು ಮೆಟಾ ವೆರಫೈಡ್ ಪ್ರತಿ ತಿಂಗಳಿಗೆ 699 ರೂ. ನಿಗದಿ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ ವೆಬ್ ಬಳಕೆದಾರರಿಗೆ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದು 599 ರೂ. ಮಾಸಿಕ ಶುಲ್ಕ ಇರಲಿದೆ ಎಂದು ಕಂಪನಿಯು ಘೋಷಿಸಿದೆ.
ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?
ನಮ್ಮಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಗಳಿಗಾಗಿ ಸಾಕಷ್ಟು ವರ್ಷಗಳ ಕಾಲ ಪ್ರಯತ್ನಿಸುತ್ತಾರೆ. ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿದ್ದರು ಸಾಕು ಅನ್ಕೋತಾರೆ. ಆದರೆ ಇನ್ನೂ ಕೆಲವರು ಪ್ರೈವೇಟ್ ಜಾಬ್ಸ್ ಬೆಸ್ಟ್ ಅಂತಾರೆ. ಯಾಕಂದ್ರೆ ಅಲ್ಲಿ ಲಕ್ಷಗಳಲ್ಲಿ ಸಂಬಳ ಸಿಗುತ್ತೆ, ಪ್ಯಾಕೇಜ್ ಚೆನ್ನಾಗಿರುತ್ತೆ ಅಂತ. ಆದ್ರೆ ಅದು ಸಂಪೂರ್ಣ ಸತ್ಯವಲ್ಲ. ಸರ್ಕಾರಿ ಕೆಲಸಗಳಲ್ಲೂ ಲಕ್ಷಾಂತರ ಸಂಬಳ ಪಡೆಯುವಂತಹ ಹುದ್ದೆಗಳಿವೆ. ಆ ಹುದ್ದೆಗಳು ಯಾವುವು ಅಂತ ನಾವು ಇವತ್ತು ನೋಡೋಣ.
ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್
ಪ್ರೈವೇಟ್ ಜಾಬ್ ಗಳಲ್ಲಿ ಲಕ್ಷಾಂತರ ರೂಪಾಯಿ ಪ್ಯಾಕೇಜ್ ಸಿಗುತ್ತೆ. ಆದರೂ ಇವತ್ತಿಗೂ ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಿಗೆ ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಯಾಕೆಂದ್ರೆ ಪ್ರೈವೇಟ್ ಜಾಬ್ ಗಳಲ್ಲಿ ಸಂಬಳ ಜಾಸ್ತಿ ಇದ್ರೂ ಜಾಬ್ ಸೆಕ್ಯೂರಿಟಿ ಇರೋದಿಲ್ಲ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಉದ್ಯೋಗ ಭದ್ರತೆ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
ಅದಕ್ಕಾಗಿಯೇ ಜನ ಜಾಸ್ತಿ ಸಂಬಳ ಬರದಿದ್ದರೂ ಜಾಬ್ ಸೆಕ್ಯೂರಿಟಿಗಾಗಿ ಸರ್ಕಾರಿ ಹುದ್ದೆಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲೂ ಸರ್ಕಾರಿ ಹುದ್ದೆಗಳಿಗೆ ಬೇಡಿಕೆ ಇದೆ. ಹಾಗಾದರೆ ಯಾವೆಲ್ಲ ಹುದ್ದೆಗಳಲ್ಲಿ ಲಕ್ಷಗಳ ಪ್ಯಾಕೇಜ್ ಸಿಗುತ್ತೆ ಅನ್ನೋದರ ಬಗ್ಗೆ ಇವತ್ತು ಇಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ
1. ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಳು:
ಅತೀ ಹೆಚ್ಚು ಸಂಬಳ ನೀಡುವ ಮತ್ತು ಗೌರವಾನ್ವಿತ ಹುದ್ದೆಗಳ ಪೈಕಿ ಉಪನ್ಯಾಸಕ ಹುದ್ದೆಯು ಒಂದು. ಉಪನ್ಯಾಸಕ ಹುದ್ದೆಗಳಿಗೆ ರೂ.40,000 ದಿಂದ 1,00,000 ದವರೆಗೂ ವೇತನ ನೀಡಲಾಗುತ್ತದೆ.
2. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆ:
ವಿದೇಶಾಂಕ ಸಚಿವಾಲಯದ ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಎಎಸ್‌ಒ) ಹುದ್ದೆ ಪಡೆಯಬೇಕಾದರೆ ಸಿಬ್ಬಂದಿ ನೇಮಕಾತಿ ಆಯೋಗದ (ಎಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆಗಳಿಗೆ 50.000 ದಿಂದ ರೂ.1,80,000 ದವರೆಗೆ ವೇತನ ನೀಡಲಾಗುತ್ತದೆ.
ಇದನ್ನೂ ಓದಿ; ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
3. ಸರ್ಕಾರಿ ಬ್ಯಾಂಕ್ ಹುದ್ದೆಗಳು;
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಬಯಸುವ ಅಭ್ಯರ್ಥಿಗಳಿಗೆ ಹುದ್ದೆ ಬೆಸ್ಟ್ ಎಂದೇಳಬಹುದು. ಈ ಹುದ್ದೆಗೆ ಸಾಮಾನ್ಯವಾಗಿ ಮಾಸಿಕ 30,000 ರಿಮದ 1,00,000 ದವರೆಗೆ ವೇತನ ನೀಡಲಾಗುತ್ತದೆ.
4. ಪಿಎಸ್‌ಯು ಜಾಬ್ಸ್ (ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್):
ಪಿಎಸ್‌ಯು ಅಥವಾ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್ ಜಾಬ್ಸ್ ಗಳಿಗೆ ಇಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸಬಹುದು. ಪಿಎಸ್‌ಯು ಹುದ್ದೆಯ ಅಧಿಕಾರಿಗಳಿಗೆ ರೂ.52,000 ಮಾಸಿಕ ಸಂಭಾವನೆ ನೀಡಲಾಗುತ್ತದೆ.
5. ರಕ್ಷಣಾ ಸೇವೆ:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಕಂಬೈನ್ಡ್ ಡಿಫೆನ್ಸ್ ಸರ್ವೀಸ್, ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ಸೇರಿದಂತೆ ಇತರೆ ಹಲವು ಪರೀಕ್ಷೆಗಳನ್ನು ರಕ್ಷಣಾ ಸೇವೆಯ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಅಥವಾ ಪದವಿ ಶಿಕ್ಷಣ ಮುಗಿಸಿದ ನಂತರ ಯಾವಾಗ ಬೇಕಾದರೂ ಈ ಸೇವೆಗೆ ಸೇರಬಹುದು. ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಆರಂಭಿಕ ವೇತನ ರೂ. 50,000 ರಿಂದ 1,00,000 ದವರೆಗೆ ಇರುತ್ತದೆ.
ಇದನ್ನೂ ಓದಿ; ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ
ಇದನ್ನೂ ಓದಿ; ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ
6. ರೈಲ್ವೆ ಇಂಜಿನಿಯರ್ ಹುದ್ದೆ:
ರೈಲ್ವೆ ಇಂಜಿನಿಯರ್ ಹುದ್ಡೆಗಳಿಗೆ ಮಹತ್ವವಾದ ಹಾಗೂ ಒಳ್ಳೆಯ ಹುದ್ದೆ ಎಂದು ಕರೆಸಿಕೊಂಡಿದ್ದೆ ಇವರಿಗೆ ವಿವಿಧ ಭತ್ಯೆಗಳ ಜೊತೆಗೆ ಮಾಸಿಕ 70,000 ರಿಂದ 1,00,000 ದವರೆಗೆ ಸಂಬಳ ನೀಡಲಾಗುತ್ತದೆ.
7. ಆದಾಯ ತೆರಿಗೆ ಇಲಾಖೆ:
ಈ ಹುದ್ದೆಯಲ್ಲಿ ನಾನಾತರವಾದ ಹುದ್ದೆಗಳು ಅದರಲ್ಲಿ ಆದಾಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಹಾಗೂ ಕಮಿಷನರ್ ವರೆಗೆ ಯಾವ ಹುದ್ದೆಗೆ ಬೇಕಾದರು ಏರಬಹುದು. ಇದರಲ್ಲಿ ವಿವಿಧ ಸೌಲಭ್ಯಗಳು ಸಹ ನೀಡಲಾಗುತ್ತದೆ. ಮಾಸಿಕ ವೇತನ 50,000 ರಿಂದ 1,00,000 ದವರೆಗೆ ನೀಡಲಾಗುತ್ತದೆ.
ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ
8. ಸರ್ಕಾರಿ ವೈದ್ಯರು:
ಇನ್ನು ವೈದ್ಯರ ವೇತನ ಹೆಚ್ಚುವರಿಯಾಗಿನೆ ಇರುತ್ತದೆ. ಓರ್ವ ಸರ್ಕಾರಿ ಹಿರಿಯ ಸರ್ಜನ್ ಗೆ 1,00,000 ದಿಂದ 2,00,000 ದವರೆಗೆ ಸಿಗುತ್ತದೆ, ಕಿರಿಯ ವೈದ್ಯರಿಗೆ 50,000 ರಿಂದ 90,000 ದವರೆಗೆ ನೀಡಲಾಗುತ್ತದೆ.
9. ಸರ್ಕಾರಿ ವಿಜ್ಞಾನಿ:
ದೇಶದ ಪ್ರಗತಿಗೆ ಹಾಗೂ ಅದರ ವೈಜ್ಞಾನಿಕ ಅಭಿವೃದ್ದಿಯಲ್ಲಿ ವಿಜ್ಞಾನಿಗಳ ಪಾತ್ರ ಬಹಳ ಮುಖ್ಯ. ಇವರಗೆ ಮಾಸಿಕ ವೇತನ 40,000 ರಿಂದ 1,00,000 ದವರೆಗೆ ನೀಡಲಾಗುತ್ತದೆ. ಹಾಗೂ ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.
ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ
10. ಸರ್ಕಾರಿ ಬ್ಯಾಂಕ್ ಹುದ್ದೆಗಳು:
ಬ್ಯಾಂಕ್ ಹುದ್ದೆಗಳಲ್ಲಿ ನಾನಾತರವದ ಹುದ್ದೆಗಳು ಇರುತ್ತದೆ ಅದರಲ್ಲಿ ಮಾಸಿಕ ವೇತನ 30,000 ರಿಂದ 1,00,000 ದವರೆಗೆ ಸಾಮಾನ್ಯವಾಗಿ ಸಿಗುತ್ತದೆ. ಇನ್ನು ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.
ಮೇಲಿನ ಸರ್ಕಾರಿ ಹುದ್ದೆಗಳಿಗೆ ನೀಡಲಾದ ವೇತನ ಮಾಹಿತಿಯೂ ಆರಂಭಿಕ ವೇತನವಾಗಿದೆ. ಅದೇ ಹುದ್ದೆಗಳಲ್ಲಿ ಮುಂದುವರೆಯುವವರು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾ ಮುಂದುವರೆಯುತ್ತಾರೆ. ಅಲ್ಲದೆ, ಆ ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ಭಡ್ತಿ ಸಹ ಪಡೆಯುತ್ತಾರೆ.