ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ನಾಯಕ.. ಹಿಂದುತ್ವದ ಕಟ್ಟಾಳು.. ಬಿಜೆಪಿಯ ಫೈರ್ ಬ್ರ್ಯಾಂಡ್.. ರಾಜ್ಯದಲ್ಲಿ ಚಿಕ್ಕಮಗಳೂರಿನ ಧ್ವನಿಯಾಗಿದ್ದ ಸಿಟಿ ರವಿ ಅವರನ್ನು ಚುನಾವಣಾ ಪ್ರಚಾರ ಕೈಗೊಂಡ ಮೂರೇ ತಿಂಗಳಲ್ಲಿ ಹೆಚ್ ಡಿ ತಮ್ಮಯ್ಯ ಸೋಲಿಸಿದ ಸ್ಟೋರಿಯೇ ರೋಚಕ.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಮೂರು ತಿಂಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ.. ಕಾಂಗ್ರೆಸ್ ಸೇರ್ಪಡೆ. ಎರಡು ತಿಂಗಳ ಹಿಂದೆ ಆಂತರಿಕ ಭಿನ್ನಾಭಿಪ್ರಾಯಕ್ಕೆ ಫುಲ್ ಸ್ಟಾಪ್.. ಕೇವಲ ಮೂರೇ ತಿಂಗಳಲ್ಲಿ 20 ವರ್ಷದಿಂದ ಬಿಜೆಪಿ ಭದ್ರಕೋಟೆಯಂತಿದ್ದ ಚಿಕ್ಕಮಗಳೂರನ್ನು ಹೆಚ್ ಡಿ ತಮ್ಮಯ್ಯ ಸೋಲಿಸಿದ್ದಾರೆ. ಈ ಕುರಿತು ತಮ್ಮಯ್ಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈ ರಾಜ್ಯದಲ್ಲಿ ಪತ್ರಿಕೆಯಲ್ಲಿ ಘಟಾನುಘಾಟಿ ಇರಬಹುದು ಆದರೆ ನನಿಗೆ ಸಿ.ಟಿ ರವಿ ಘಾಟಾನುಘಾಟಿ ಎಂದು ಯಾವತ್ತು ವೈಯಕ್ತಿಕವಾಗಿ ಅನಿಸಿಲ್ಲ ಎಂದು ತಮ್ಮಯ್ಯ ಹೇಳಿದ್ದಾರೆ. ಸಿ.ಟಿ ರವಿ ಶಾಸಕ ಆಗೋದಕ್ಕಿಂತ ಮುಂಚೆ ನಾನು ಎರಡು ಬಾರಿ ನಗರ ಸಭೆ ಸದಸ್ಯನಾಗಿ ಉಪಾಧ್ಯಕ್ಷನಾಗಿದ್ದೆ, ಅವರು ಶಾಸಕರೇ ಆಗಿರಲಿಲ್ಲ ಅನಂತರದಿಂದ ಸಿ.ಟಿ ರವಿ ಜೊತೆ ಇದ್ದೆ ಎಂದಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಉದ್ಯಮಿ ಕೃತ್ಯದ ವಿರುದ್ಧ ಮಹಿಳೆಯಿಂದ ದೂರು
- ಸಿ. ಟಿ ರವಿ ಸೋಲನ್ನು ಸಂಭ್ರಮಿಸುವ ರೀತಿ ವ್ಯಂಗ್ಯವಾಡಿದ ಎಂ ಪಿ ಕುಮಾರಸ್ವಾಮಿ
- ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣೆಯಲ್ಲಿ ತಂತ್ರ ಕುತಂತ್ರ ಎರಡೂ ಮಾಡಿದ್ದಾರೆ. ಅದೆರೆಡು ನನಿಗೆ ಗೊತ್ತಿತ್ತು, ಅವರ ತಂತ್ರ ಕುತಂತ್ರಕ್ಕೆ ಪ್ರತಿತಂತ್ರ ಹೂಡುವುದಕ್ಕೆ ನನಗೆ ಗೊತ್ತಿತ್ತು. ಅದರ ಜೊತೆಗೆ ಜನರ ಪ್ರೀತಿ ಗಳಿಸಿದ್ದೀನಿ. ನಮ್ಮ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪ್ರತಿಯೊಬ್ಬರು ಕಾಂಗ್ರೆಸ್ ನ್ನ ಗೆಲ್ಲಿಸಲೇಬೇಕು, ಬಿಜೆಪಿನ ಸೊಲಿಸಲೇಬೇಕು ಎಂದು ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ
ಚುನಾವಣೆ ಪ್ರಚಾರಕ್ಕಾಗಿ ಸಿದ್ದಾರಮಾಯ್ಯ ಬಂದಿದ್ರು, ಖರ್ಗೆ ಬಂದಿದ್ರು ಪ್ರಜಾಧ್ವನಿ ಯಾತ್ರೆಯನ್ನು ಕೂಡ ಯಶಸ್ವಿಯಾಗಿ ಮಾಡಿದ್ದೆವು, ಚಿಕ್ಕಮಗಳೂರಿನ ಕಾಂಗ್ರೆಸ್ ಭದ್ರ ಕೋಟೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಭದ್ರ ಕೋಟೆಯಾನ್ನಾಗಿ ಮಾಡಿಕೊಂಡಿತ್ತು. ಜಿಲ್ಲೆಯಲ್ಲಿ 5 ಕ್ಕೆ 5 ಕ್ಷೇತ್ರೆ ಗೆಲ್ಲುವ ಮೂಲಕ ಕಾಂಗ್ರೆಸ್ ಭದ್ರ ಕೋಟೆಯಾನ್ನಾಗಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಅಭಿವೃದ್ದಿ ಅನ್ನೋದನ್ನು ಮಾಡಿದ್ದು, 4 ನೇ ಬಾರಿ ಗೆದ್ದ ನಂತರ ಯಾಕೆಂದರೆ 4 ನೇ ಬಾರಿ ಗೆಲ್ಲೊದ್ದು ತುಂಬಾ ಕಷ್ಟವಾಗಿತ್ತು ಮುಂದಿನ ಚುನಾವಣೆ ಕಷ್ಟ ಇದೆ ಅನ್ನೊದು ಅವರಿಗೆ ಗೊತ್ತಾಗಿತ್ತು ಹಾಗಾಗಿ 4 ನೇ ಬಾರಿ ಗೆದ್ದ ಮೇಲೆ ಚಿಕ್ಕಮಗಳೂರಿನಲ್ಲಿ ಅಭಿವೃದ್ದಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ; ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದ್ದ ಚಿಕ್ಕಪ್ಪ?
ಕಾಂಗ್ರೆಸ್ ಗೆ ಪ್ರತ್ಯಕ್ಷ ಬೆಂಬಲಕ್ಕೆ ನಿಂತಿದ್ದ ಜೆಡಿಎಸ್
ಇನ್ನು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯನ್ನು ಹೇಗಾದರೂ ಮಾಡಿ ಸೋಲಿಸಬೇಕಿಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಪಣ ತೊಟ್ಟಿದ್ದವು. ಚುನಾವಣೆಗೆ 6 ತಿಂಗಳು ಇರುವಾಗಲೇ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದ ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಚುನಾವಣೆ ಸಂದರ್ಭ ಸೈಲೆಂಟ್ ಆಗಿದ್ದರು. ಪ್ರತ್ಯಕ್ಷವಾಗಿಯೇ ಜೆಡಿಎಸ್ ಎಂ ಎಲ್ ಸಿ ಭೋಜೇಗೌಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರನ್ನು ಗೆಲ್ಲಿಸಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿ ಹೆಚ್ ಹರೀಶ್ 38,317 ಮತ ಪಡೆದಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ ಎಲ್ ಶಂಕರ್ 44,549 ಮತ ಪಡೆದಿದ್ದರು. ಆದರೆ ಈ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದದ ಒರಿಣಾಮ ಕಾಂಗ್ರೆಸ್ ಅದ್ಭುತ ಪ್ರದರ್ಶನ ನೀಡಿ 85,054 ಮತ ಪಡೆದಿದೆ. ಸಿಟಿ ರವಿ ಕಳೆದ ಬಾರಿಗಿಂತಲೂ 10 ಸಾವಿರ ಅಧಿಕ ಮತಗಳನ್ನು ಪಡೆದುಕೊಂಡರೂ 5,926 ಮತಗಳ ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿ, ಸಿಟಿ ರವಿ ಲಿಂಗಾಯಿತರ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ನಕಲಿ ಸುದ್ದಿಯ ಜೊತೆಗೆ ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ ಈ ಚುನಾವಣೆಯಲ್ಲಿ ಕೆಲಸ ಮಾಡಿವೆ.
ಇದನ್ನೂ ಓದಿ; ಸರ್ಕಾರಿ ನೌಕರನಿಂದ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ ಆರೋಪ, ಶಿಸ್ತು ಕ್ರಮಕ್ಕೆ