ಆಲ್ದೂರು; (ನ್ಯೂಸ್ ಮಲ್ನಾಡ್ ವರದಿ) ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಆಲ್ದೂರಿನಲ್ಲಿ ನಡೆದಿದೆ. ಪ್ರಿಯದರ್ಶಿನಿ (26) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.
ಪ್ರಿಯದರ್ಶಿನಿ ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದವರಾಗಿದ್ದು ಆಲೂರು ಸಮೀಪದ ದೊಡ್ಡಮಾಗರವಳ್ಳಿಯ ಮಧು ಅವರೊಂದಿಗೆ ವಿವಾಹವಾಗಿತ್ತು. ಇವರಿಗೆ 4 ವರ್ಷದ ಹೆಣ್ಣು ಮಗುವಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣ
- ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
- ಹಿಂದು ಬ್ರಿಗೇಡ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಹಿಳಾ ಅಭ್ಯರ್ಥಿ
ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಸ್ಟ್ ಆಫೀಸ್ನಲ್ಲಿರುವ ಈ 5 ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?
ಅಂಚೆ ಇಲಾಖೆ ಠೇವಣಿ ಯೋಜನೆ: ನೀವು ಪೋಸ್ಟ್ ಆಫೀಸ್ ನ (post office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್ ನಲ್ಲಿದೆ.
ಇದನ್ನೂ ಓದಿ; ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಸ್ಟಾಕ್ ಮಾರ್ಕೆಟ್ (stock market) ಯಾವಾಗಲು ಏರಿಳಿತ ಕಾಣುತ್ತಲೇ ಇರುತ್ತದೆ. ಹೀಗಾಗಿ ಅನೇಕರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಆದರೆ, ನೀವು ಪೋಸ್ಟ್ ಆಫೀಸ್ ನ (post office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್ ನಲ್ಲಿದೆ.
ಸಣ್ಣ ಮೊತ್ತದಿಂದ ಪ್ರಾರಂಭಿಸಿ ಅಧಿಕ ಹಣ ಮರಳಿ ಪಡೆಯುವಂತಹ ಅನೇಕ ಪ್ಲಾನ್ ಗಳು ಇದರಲ್ಲಿದೆ. ಇಲ್ಲಿ ಪೋಸ್ಟ್ ಆಫೀಸ್ ನ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ (rd), ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ (potd) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (nsc). ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ
ಮರುಕಳಿಸುವ ಠೇವಣಿ ಯೋಜನೆ:
ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯ–ಮುಕ್ತವಾಗಿದೆ. ಹೀಗಾಗಿ ಯಾರು ಬೇಕಾದರು ಧೈರ್ಯದಿಂದ ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಯೋಜನೆಗೆ ನಿಯಮಿತ ಮಧ್ಯಂತರದಲ್ಲಿ ಖಾತೆಗೆ ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ, ಇದಕ್ಕಾಗಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ. ತಮ್ಮ ಹೂಡಿಕೆಯ ಮೇಲಿನ ಭದ್ರತೆ ಇಷ್ಟಪಡುವ ಮತ್ತು ಸ್ಥಿರವಾದ ಹಣವನ್ನು ಬಡ್ಡಿಯಾಗಿ ಗಳಿಸಲು ಬಯಸುವ ಹೂಡಿಕೆದಾರರಿಗೆ, ಪೋಸ್ಟ್ ಆಫೀಸ್ ಆರ್‌ಡಿ ಸೂಕ್ತ ಹೂಡಿಕೆಯಾಗಿದೆ. ಇದಲ್ಲದೆ, ಈ ಯೋಜನೆಯು ಜನರಿಗೆ ನಿಗದಿತ ಮೊತ್ತ ಗಳಿಸಲು ಮತ್ತು ಕಾಲಾನಂತರದಲ್ಲಿ ಉತ್ಪಾದಿಸಲು ಮತ್ತು ಸ್ಥಿರ ಆದಾಯ ಗಳಿಸಲು ಸಹ ಪ್ರಯೋಜನಕಾರಿಯಾಗಿದೆ. ಇದರ ಮೇಲೆ ಸದ್ಯ 5.8% ಬಡ್ಡಿದರವನ್ನು ನೀಡಲಾಗುತ್ತದೆ. ಇದು ಜನರ ಉನ್ನತ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.
ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ:
ಹೆಸರೇ ಸೂಚಿಸುವಂತೆ ಇದು ಸಮಯದ ಠೇವಣಿ ಖಾತೆ. ಈ ಯೋಜನೆ ಅಡಿಯಲ್ಲಿ ನೀವು ಒಂದು, ಎರಡು, ಮೂರು ಅಥವಾ ಐದು ವರ್ಷಕ್ಕೆಂದು ಹಣವನ್ನು ಠೇವಣಿ ಮಾಡಬಹುದು. ಒಂದು, ಎರಡು ಮತ್ತು ಮೂರು ವರ್ಷಕ್ಕೆ ಎಂದಾದರೆ ಇದರಲ್ಲಿ 5.5% ಬಡ್ಡಿ ದರವನ್ನು ನೀಡಲಾಗುತ್ತಿದೆ. ನೀವು ಉತ್ತಮ ರಿಟರ್ನ್ ಅನ್ನು ಎದುರು ನೋಡುತ್ತಿದ್ದರೆ ಹಣವನ್ನು ಐದು ವರ್ಷಕ್ಕೆ ಡೆಪಾಸಿಟ್ ಮಾಡಬೇಕು. ಹೀಗಾದಲ್ಲಿ 6.7% ಬಡ್ಡಿ ದರ ಸಿಗುತ್ತದೆ.
ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ:
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಐದು ವರ್ಷದ್ದಾಗಿದೆ. 6.8% ಬಡ್ಡಿದರಲ್ಲಿ ನಿಮಗೆ ರಿಟರ್ನ್ ಸಿಗುತ್ತದೆ. ಇದರಲ್ಲಿ ಎಷ್ಟು ಬೇಕಾದರೂ ಹಣವನ್ನು ನೀವು ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆ ಅಡಿಯಲ್ಲಿ ನಿಮಗೆ ಹಣವನ್ನು ಮಧ್ಯದಲ್ಲಿ ಅಗತ್ಯವಿದ್ದರೆ ತೆಗೆಯಲು ಸಾಧ್ಯವಿಲ್ಲ. ಪೂರ್ಣ ಐದು ವರ್ಷ ಆದ ನಂತರವ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ;
ಈ ಯೋಜನೆಯು ಸೆಕ್ಷನ್ 80c ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆ ಆರಂಭಿಸಬೇಕು. ಈ ಯೋಜನೆಯು ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಯೋಜನೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ. ಇದರಲ್ಲಿ ಹೂಡಿಕೆದಾರರು ನಿಗದಿತ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ;
ಈ ಯೋಜನೆಯು ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯಾಗಿದೆ. ಇದು 5 ವರ್ಷಗಳ ಅವಧಿಯನ್ನು ಹೊಂದಿದೆ. ಸೆಕ್ಷನ್ 80 ಸಿ ಪ್ರಕಾರ, ವರ್ಷಕ್ಕೆ 1.50 ಲಕ್ಷದವರೆಗೆ ತೆರಿಗೆ ವಿನಾಯಿತಿ ಅನ್ವಯಿಸುತ್ತದೆ. ಟಿಡಿಎಸ್ ಇಲ್ಲ. ಈ ಯೋಜನೆಗಳಲ್ಲಿ ಯಾವುದಾದರೂ ಒಂದರಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ತೆರಿಗೆ ವಿನಾಯಿತಿ ಕಡಿಮೆಯಾಗುತ್ತದೆ. ಆದಾಗ್ಯೂ, ಹಿರಿಯ ನಾಗರಿಕರಿಗೆ ಅನ್ವಯಿಸುವ ನಿಯಮಗಳು ವಿಭಿನ್ನವಾಗಿವೆ. ಸೆಕ್ಷನ್ 80 ರ ಅಡಿಯಲ್ಲಿ ತೆರಿಗೆ ವಿನಾಯಿತಿ ಅನ್ವಯಿಸುತ್ತದೆ.