ಬೆಂಗಳೂರು: ಐಎಫ್ ಎಸ್, ಐಪಿಎಸ್, ಐಎಎಸ್, ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹನಿ ಟ್ರ್ಯಾಪ್ ಮಾಡ್ತಿದ್ದ ವಿದ್ಯಾ ಎಂಬ ಹೆಸರಿನ ಖತರ್ನಾಕ್ ಲೇಡಿಯನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಸದಸ್ಯೆ ಅಗಿರೋ ಈಕೆ ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈಕೆ ಹೈ ಪ್ರೊಫೈಲ್ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ವ್ಯವಹಾರವನ್ನು ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ವಿದ್ಯಾ, ಹಲವು ಐ ಎಫ್ ಎಸ್, ಐಪಿಎಸ್, ಐಎಎಸ್, ರಾಜಕಾರಣಿಗಳು ಮತ್ತು ಉದ್ಯಮಿಗಳ ಜೊತೆ ಸ್ನೇಹವನ್ನು ಗಳಿಸಿ ಸಂಬಂಧವನ್ನು ಬೆಳೆಸಿಕೊಂಡು ಸಾಲಿಗೆಯಿಂದ ಇರುವ ಫೋಟೋ ಗಳನ್ನು ತೆಗೆದುಕೊಳ್ಳುತ್ತಿದ್ದಳು ಅನಂತರ ತನ್ನ ಬಳಿ ಸಲಿಗೆಯಿಂದ ಇರುವ ಫೋಟೊ ಇದೆ ವಿಡಿಯೋ ಇದೆ ಎಂದು ಹೆದರಿಸಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣವನ್ನು ದೋಚುತ್ತಿದ್ದಳು.
ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರೊಂದಿಗೆ ಸಲುಗೆ ಬೆಳಸಿ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಳು. ಈ ಕುರಿತು ಕಂಟ್ರಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದರು. ಕೇಸ್ ದಾಖಲು ಮಾಡಿದ್ದ ಪೊಲೀಸರು ಅರೋಪಿ ವಿದ್ಯಾಳನ್ನು ಬಂಧಿಸಿ ತನಿಖೆಯನ್ನು ನಡೆಸಿದರು.ವಿದ್ಯ ಬಂಧನ ಬಳಿಕ ತನಿಖೆಯ ವೇಳೆ ರಾಜ್ಯದ ಹಾಗೂ ಬೇರೆ ರಾಜ್ಯದ ಐ ಎಫ್ ಎಸ್. ಐ ಪಿ ಎಸ್. ಹಾಗು ಇತರ ಅಧಿಕಾರಿಗಳಿಗೂ ಬ್ಲ್ಯಾಕ್ ಮೇಲ್ ಮಾಡಿ ಹಣವನ್ನು ಪಡೆದಿರುವುದು ಬಯಲಾಗಿದ್ದು ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ನಡೆಸಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.