ಜೈಪುರ: ಹೋಂವರ್ಕ್ ಮಾಡದ ಕಾರಣ ಶಿಕ್ಷಕ ನೊಬ್ಬ ವಿದ್ಯಾರ್ಥಿಗೆ ಥಳಿಸಿ ಸಾಯಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಸಲಸರ್ ಜಿಲ್ಲೆಯ ಕೋಲಾಸರ್ ನಲ್ಲಿ ನಡದಿದೆ.
ಖಾಸಗಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿಯನ್ನು ಆತನ ಶಿಕ್ಷಕ ಹೋಮ್ ವರ್ಕ್ ಮಾಡಲಿಲ್ಲವೆಂದು ಅಮಾನುಷವಾಗಿ ಥಳಿಸಿದ ಕಾರಣ ಗಣೇಶ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಗಣೇಶ್ 15 ದಿನಗಳ ಹಿಂದೆ ತನ್ನ ತಂದೆ ಓಂಪ್ರಕಾಶ್ ಗೆ ಶಿಕ್ಷಕ ಮನೋಜ್ ವಿನಾಕಾರಣ ಥಳಿಸುತ್ತಿದ್ದಾನೆ ಎಂದು ಹೇಳಿದ್ದ.
ತರಗತಿಯಲ್ಲಿ ಹೋಂವರ್ಕ್ ಮಾಡದೇ ಇದ್ದುದ್ದರಿಂದ ಗಣೇಶ್ ಗೆ ಮನೋಜ್ ಎಂಬ ಶಿಕ್ಷಕ ಥಳಿಸಿದ್ದರು ಪರಿಣಾಮ ಆ ಬಾಲಕ ಮೂರ್ಛೆ ತಪ್ಪಿ ಬಿದ್ದಿದ್ದ ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ತಂದೆಗೆ ಕರೆ ಮಾಡಿ ವಿಷಯವನ್ನು ತಿಳಿಸಿದರು ವಿಷಯ ತಿಳಿದ ಬಾಲಕನ ತಂದೆ ಓಂಪ್ರಕಾಶ್ ಹೊಲದಿಂದ ನೇರವಾಗಿ ಶಾಲೆಗೆ ಬಂದಿದ್ದಾರೆ.
ತರಗತಿಯ ಮಕ್ಕಳು ಆ ಬಾಲಕನನ್ನು ಶಿಕ್ಷಕ ತೀವ್ರವಾಗಿ ಹೊಡೆದ ನಂತರ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ ಎಂದು ಹೇಳಿದರು. ಗಣೇಶ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಸಲಸರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆ ವೈದ್ಯರು ಗಣೇಶ್ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಮೃತ ಗಣೇಶ್ ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕ ಮನೋಜ್ ಕುಮಾರ್ ವಿರುದ್ಧ 302 ಪ್ರಕರಣ ದೂರು ದಾಖಲಿಸಲಾಗಿದೆ. ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಗಣೇಶನ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.