Wednesday, November 29, 2023
Homeಆಧ್ಯಾತ್ಮಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಪ್ರಕರಣ - 450 ಜನರ ಬಂಧನ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಪ್ರಕರಣ – 450 ಜನರ ಬಂಧನ.

ಢಾಕಾ : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 71 ಕೇಸ್ ಗಳನ್ನು ದಾಖಲಿಸಲಾಗಿದೆ. ಅಲ್ಲದೇ, ವದಂತಿ ಹರಡುತ್ತಿದ್ದ 450 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮವರ್ಗದವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಹಿಂದೂಗಳ ಪೂಜಾ ಸ್ಥಳಗಳು, ದೇವಾಲಯಗಳು, ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ಕಳೆದ ಐದು ದಿನಗಳಲ್ಲಿ ನಡೆಸುತ್ತಿರುವ ದಾಳಿ ಹಾಗೂ ವದಂತಿ ಹರಡುತ್ತಿದ್ದಕ್ಕೆ 450 ಜನರನ್ನು ಬಂಧಿಸಲಾಗಿದೆ ಎಂದು ಢಾಕಾ ವರದಿಯನ್ನು ನೀಡಿದೆ.

ದೇಶದ ವಿವಿಧೆಡೆಗಳಲ್ಲಿ 71 ಕೇಸ್ ಗಳು ದಾಖಲಾಗಿದೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಎಂ.ಡಿ. ಕಮರುಜ್ ಮಾನ್ ಸುದ್ದಿಗಾರರಿಗೆ ಹೇಳಿದ್ದಾರೆ.

ಈ ದಾಳಿಯ ಪ್ರಕರಣದ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಬಂಧನಗಳು ಮತ್ತು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Most Popular

Recent Comments