Friday, June 9, 2023
Homeಇತರೆಮಂಗಳೂರು: ಅನ್ಯಕೋಮಿನ ಯುವಕನ ಜೊತೆ ಯುವತಿ, ಬಾಲಕಿ ಪತ್ತೆ

ಮಂಗಳೂರು: ಅನ್ಯಕೋಮಿನ ಯುವಕನ ಜೊತೆ ಯುವತಿ, ಬಾಲಕಿ ಪತ್ತೆ

ಮಂಗಳೂರು: ಅನ್ಯಕೋಮೀನ ಯುವಕರ ಜೊತೆ ಹಿಂದೂ ಯುವತಿ ಮತ್ತು ಬಾಲಕಿಯೊಬ್ಬಳು ಪತ್ತೆಯಾದ ಘಟನೆ ನಗರದ ಗುರುಪುರ ಬಳಿಯ ಚಿಲಿಂಬಿಗುಡ್ಡೆಯಲ್ಲಿ ನಡೆದಿದೆ.

ನಗರದ ಹೊರವಲಯದ ಗುರುಪುರ ಬಳಿಯ ಚಿಲಿಂಬಿಗುಡ್ಡೆಯಲ್ಲಿ ಇಬ್ಬರು ಯುವಕರ ಜೊತೆ ಯುವತಿ ಮತ್ತು ಬಾಲಕಿ ಪತ್ತೆಯಾಗಿದ್ದಾರೆ.

ಇಬ್ಬರು ಯುವಕರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಜ್ಪೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಹಿಂದೂ ಯುವತಿ, ಬಾಲಕಿ ಮತ್ತು ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಯುವಕರು ಮಾದಕ ವಸ್ತು ಸೇವನೆ ಮಾಡಿರುವ ಮಾಹಿತಿಯನ್ನು ಸಂಘಟನೆಯವರು ಮಾಹಿತಿಯನ್ನು ನೀಡಿದ್ದರು, ಆದ್ದರಿಂದ ಪೊಲೀಸರು ಯುವಕರ ಡ್ರಗ್ಸ್ ಟೆಸ್ಟ್ ಮಾಡಿಸಿದ್ದು ಡ್ರಗ್ಸ್ ಸೇವಿಸಿರುವುದು ಖಚಿತವಾಗಿರುವುದರಿಂದ ಮತ್ತು ಈ ತಂಡದಲ್ಲಿ ಬಾಲಕಿಯೊಬ್ಬಳು ಇದ್ದರಿಂದ ಬಾಲಕಿಯ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಶಾಕೀರ್ ಮತ್ತು ಧೀರಜ್ ರವರ ಮೇಲೆ ಡ್ರಗ್ಸ್ ಕೇಸಿನ ಜೊತೆ ಪೋಕ್ಸೋ ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದಾರೆ.

Most Popular

Recent Comments