ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಕ್ಷೇತ್ರದಿಂದ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪ್ರವೀಣ್ ಖಾಂಡ್ಯ ಇಂದು ಬಿಜೆಪಿ ಸೇರ್ಪಡೆಯಾದರು.
ಇದನ್ನೂ ಓದಿ; ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್
ಇದನ್ನೂ ಓದಿ; ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹಾಗೂ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ ಎನ್ ಜೀವರಾಜ್ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮರುಡಪ್ಪ ಬಿಜೆಪಿ ಬಾವುಟ ನೀಡಿ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿಕೊಂಡರು. ಈ ವೇಳೆ ಯುವ ಮೋರ್ಚ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ಹಲವು ಮುಖಂಡರಿದ್ದರು.
ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಸಭೆ
ಕಳೆದ ಕೆಲ ದಿನಗಳ ಹಿಂದೆ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಮಾಜಿ ಶಾಸಕ ಜೀವರಾಜ್ ಇಬ್ಬರು ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನೆಗೆ ಭೇಟಿ ನೀಡಿ ಚುನಾವಣೆ ಕುರಿತಂತೆ ಹಾಗೂ ಸಂಘಟನೆ ಮತ್ತು ಬಿಜೆಪಿ ನಡುವೆ ಇದ್ದ ಒಳ ಅಂತರದ ಕುರಿತು ಚರ್ಚಸಿದ್ದರು. ಅದಕ್ಕೂ ಮುನ್ನ ಪ್ರವೀಣ್ ಖಾಂಡ್ಯ ಈ ಬಾರಿಯೂ ಹಿಂದು ಬ್ರಿಗೇಡ್ ಮೂಲಕ ಈ ಬಾರಿ ಬಿಜೆಪಿ ವಿರುದ್ಧ ಬಂಡಾಯ ಏಳುವ ಸುಳಿವು ನೀಡಿದ್ದರು. ಆದರೆ ಆರೆಸ್ಸೆಸ್ ನಾಯಕರ ಮನವೊಲಿಕೆ ನಂತರ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹಿಂದೂ ಯುವಕನ ಬರ್ಬರ ಹತ್ಯೆ; ನಾಲ್ವರು ಹಂತಕರು ಅಂದರ್
- ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಸಾವು
- ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಪ್ರಾಣಾಪಾಯದಿಂದ ಪಾರು
ಪ್ರವೀಣ್ ಖಾಂಡ್ಯ ಹಿಂದು ಬ್ರಿಗೇಡ್ ನಲ್ಲಿಲ್ಲ
ಹಿಂದು ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಪ್ರವೀಣ್ ಖಾಂಡ್ಯ ನಮಗೆ ಗೊತ್ತಿಲ್ಲದೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಅವರು ಈಗ ಹಿಂದು ಬ್ರಿಗೇಡ್ ನಲ್ಲಿ ಇಲ್ಲ ಎಂದು ಹಿಂದು ಬ್ರಿಗೇಡ್ ತಾಲ್ಲೂಕು ಅಧ್ಯಕ್ಷ ಸುರೇಶ್ ಬಂಡಾರಿ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹಿಂದು ಬ್ರಿಗೇಡ್ ನಲ್ಲಿ ಗುರಿತಿಸಿಕೊಂಡಿದ್ದ ಪ್ರವೀಣ್ ಖಾಂಡ್ಯ, ಗೌರಿಗಂಡಿ ಚಂದ್ರಶೇಖರ್ ಹಾಗೂ ಬಿಜೆಪಿ ಅಭ್ಯರ್ಥಿ ಜೀವರಾಜ್ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹಿಂದುತ್ವದ ಕಾರಣಕ್ಕಾಗಿ ಈ ಬಾರಿ ಬಿಜೆಪಿ ಹಾಗೂ ಹಿಂದು ಬ್ರಿಗೇಡ್ ಒಂದಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಲಾಗಿತ್ತು. ಈ ಕುರಿತು ಮತನಾಡಿದ ಸುರೇಶ್ ಬಂಡಾರಿ, ಇದು ಕೇವಲ ಪ್ರವೀಣ್ ಖಾಂಡ್ಯ ಒಬ್ಬರ ತೀರ್ಮಾನವೇ ಹೊರತು ಹಿಂದು ಬ್ರಿಗೇಡ್ ನದ್ದಲ್ಲ. ಅವರು ಹಿಂದು ಬ್ರಿಗೇಡ್ ನ ಸದಸ್ಯರಾಗಿದ್ದರು. ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗುವ ವಿಚಾರವನ್ನು ನಮ್ಮೊಂದಿಗೆ ಪ್ರಸ್ತಾಪಿಸಿಲ್ಲ. ಈಗ ಪ್ರವೀಣ್ ಖಾಂಡ್ಯ ಸಂಘಟನೆಯಿಂದ ಹೊರಗಿದ್ದಾರೆ ಎಂದು ಹೇಳಿದ್ದರು.
ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹೇಶ್ ಕಟ್ಟಿನಮನೆ ಬಿಜೆಪಿ ಸೇರ್ಪಡೆ:
ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನೇಕ ದಶಕಗಳಿಂದ ಹಿಂದುತ್ವದ ಪರವಾಗಿ ಧ್ವನಿ ಎತುತ್ತಾ, 2013 ಮತ್ತು 2018 ರ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಹೇಶ್ ಕಟ್ಟಿನಮನೆ ಅವರು ಇಂದು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಡಿ.ಎನ್.ಜೀವರಾಜ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಹಾಗೂ ಪ್ರವೀಣ್ ಖಾಂಡ್ಯ ಅವರ ಜೊತೆಗೆ ಜಯಶೀಲ ಉಜ್ಜಿನಿ, ರಜಿತ್ ಗುಡ್ಡೆಕೊಪ್ಪ, ಸಂದೇಶ್ ಉಜ್ಜಿನಿ, ದಿಲೀಪ್ ಬೆಳಸೆ, ರಂಜಿತ್ ಮಾಗಲು, ಪ್ರಕಾಶ್ ಉಜ್ಜಿನಿ, ರಘು ಕುಮಾರ್ ಉಜ್ಜಿನಿ, ಸದಾನಂದ, ಶ್ರೀದೀಪ್ ಸಂಗಮೇಶ್ವರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಕಟ್ಟರ್ ಹಿಂದುತ್ವವಾದಿ ತುಡಕುರ್ ಮಂಜು ಅವರು ಇಂದು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಡಿ.ಎನ್.ಜೀವರಾಜ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು