ಕಾರ್ಕಳ: ಬುಧವಾರ ತಮಿಳುನಾಡಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್ ನಲ್ಲಿ ಮಡಿದ ಸೇನಾಧಿಕಾರಿಗಳಲ್ಲಿ ಓರ್ವ ಕಾರ್ಕಳದ ಅಳಿಯ ಎಂದು ತಿಳಿದುಬಂದಿದೆ.
ಸೇನಾಧಿಕಾರಿ ಲೆ. ಕ ಹರ್ಜಿಂದರ್ ಸಿಂಗ್ ರವರು ಕಾರ್ಕಳದ ಪ್ರಪುಲ್ಲ ಮಿನೇಜಸ್ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು.
ಪ್ರಪುಲ್ಲಾ ಮಿನೇಜಸ್ ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷ ದಿ. ಫಿಲಿಪ್ಸ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ರವರ ಮಗಳಾಗಿದ್ದು ಇವರು ಭೂ ಸೇನೆಯ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಸೇನಾ ಹೆಲಿಕಾಪ್ಟರ್ ನಲ್ಲಿ ಒಟ್ಟು 14 ಜನ ಪ್ರಯಾಣಿಸುತ್ತಿರುವ ವೇಳೆ ಅವಘಡ ಸಂಭವಿಸಿ ಆ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದರು, ಆ ಮೃತಪಟ್ಟ ಸೇನಾ ಅಧಿಕಾರಿಗಳಲ್ಲಿ ಲೆ. ಕ ಹರ್ಜಿಂದರ್ ಸಿಂಗ್ ಕೂಡ ಒಬ್ಬರು