Wednesday, November 29, 2023
Homeಮಲೆನಾಡುಚಿಕ್ಕಮಗಳೂರುಮುಂಗಾರು ಮಳೆ ಆರಂಭ ಹಿನ್ನಲೆ; ಅಧಿಕಾರಿಗಳು ತೆಗೆದುಕೊಂಡ ಕ್ರಮಗಳೇನು?

ಮುಂಗಾರು ಮಳೆ ಆರಂಭ ಹಿನ್ನಲೆ; ಅಧಿಕಾರಿಗಳು ತೆಗೆದುಕೊಂಡ ಕ್ರಮಗಳೇನು?

ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಇದರಿಂದ ಯಾವುದೇ ರೀತಿಯ ಅನಾಹುತಗಳು ಆಗದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; ಹಿಟ್‌ ಅಂಡ್‌ ರನ್‌; ತಪ್ಪಿದ ಭಾರಿ ಅನಾಹುತ

ಇದನ್ನೂ ಓದಿ; ವಿದ್ಯುತ್‌ ತಂತಿ ತಗುಲಿ ಕಾಡಾನೆ ಸಾವು

ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಜೀವ ಹಾನಿಯೂ ಸಂಭವಿಸಿತ್ತು. ಹಾಗಾಗಿ, ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತದೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮುಂಜಾಗ್ತತಾ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ. 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಗುರುತಿಸಲಾಗಿದೆ. ಎನ್.ಆರ್.ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ. ಈ ಮೂಲಕ ಒಟ್ಟು 108 ಅಪಾಯದ ಸ್ಥಳಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾದ್ಯಂತ 40ಕ್ಕೂ ಹೆಚ್ಚು ಸುರಕ್ಷಿತ ಪ್ರದೇಶವನ್ನೂ ಗುರುತು ಮಾಡಲಾಗಿದೆ. ಯಾವುದೇ ರೀತಿಯ ತೊಂದರೆ ಆದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ; ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು

64 ಜೆಸಿಬಿ, 65 ಹಿಟಾಚಿ, 83 ಟ್ರ‍್ಯಾಕ್ಟರ್, 155 ಟಿಪ್ಪರ್‌ಗಳನ್ನು ಪ್ರವಾಹವನ್ನು ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ. ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನು ನಿಯೋಜಿಸಿದೆ.

ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಆದರೆ, ಸರ್ಕಾರ ಪ್ರವಾಹದಿಂದ ಜನರನ್ನು ರಕ್ಷಣೆ ಮಾಡುವುದರ ಜೊತೆ ಎಲ್ಲಾ ಕಳೆದುಕೊಂಡವರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ನೀಡಲಿ ಅನ್ನುವುದು ಜನರ ಆಗ್ರಹವಾಗಿದೆ.

ನಾನು ಕಾಂಗ್ರೆಸ್ ಶಾಸಕನಾಗಿರಬಹುದು ಆದರೆ ನಾನೊಬ್ಬ ಸಂಘದ ಸ್ವಯಂಸೇವಕ ಎನ್ನಲು ಹೆಮ್ಮೆಯಿದೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನೊಬ್ಬ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದ್ದಾರೆ.

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ನಗರದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿಯಲ್ಲಿ ಕೋದಂಡ ಸ್ವಾಮಿ ದೇವಸ್ಥಾನದ ಸಮಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವಾಗ ದಾನಿಗಳ ಬಳಿ ಸಂಗ್ರಹಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರು ನೀಡುತ್ತಿದ್ದ 500 ರೂ. ದೊಡ್ಡ ಹಣವಾಗುತ್ತಿತ್ತು. ಇದನ್ನು ಚಂದ ವಸೂಲಿ ಎಂದು ಹೇಳುವುದಿಲ್ಲ ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ 15 ರಿಂದ 16 ವರ್ಷ ಕೆಲಸ ಮಾಡಿದ್ದೇನೆ. ಈಗಲೂ ನಾನೊಬ್ಬ ಸಂಘದ (rss) ಸ್ವಯಂ ಸೇವಕ. ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರೂ ಸಂಘದಲ್ಲಿನ ಶಿಸ್ತಿನಿಂದ ನಾನೊಬ್ಬ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.

Most Popular

Recent Comments