Sunday, October 1, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು/ಕೊಡಗು: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಚಿಕ್ಕಮಗಳೂರು/ಕೊಡಗು: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಚಿಕ್ಕಮಗಳೂರು/ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ;  ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ

ಹವಾಮಾನ ಇಲಾಖೆ ಏಪ್ರಿಲ್ 21ರಿಂದ ರಾಜ್ಯದಲ್ಲಿ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣಹವೆ ಇತ್ತು. ಗರಿಷ್ಟ ಉಷ್ಣಾಂಶ ಕರಾವಳಿಯ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇನ್ನು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದೆ. ಈ ವೇಳೆ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಸಹ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಜನರು ಎಚ್ಚರಿಕೆಯಿಂದಿರಬೇಕೆಂದು ಸೂಚನೆ ನೀಡಿದೆ.

ಚಿಕ್ಕಮಗಳೂರು; ಟವರ್ ಮೇಲೇರಿದ ಬಿಜೆಪಿ ಕಾರ್ಯಕರ್ತ; ವಿಡಿಯೋ ಮಾಡಿ ಹೇಳಿದ್ದೇನು ಗೊತ್ತಾ?

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಇದರ ಮಧ್ಯೆ ಬಿಜೆಪಿ ಕಾರ್ಯಕರ್ತನೊಬ್ಬ ಬಿಎಸ್‌ಎನ್‌ಎಲ್ ಟವರ್ ಮೇಲೇರಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ರಂಗಪ್ಪ ಬೋವಿ ಎನ್ನುವಾತ ಟವರ್ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಟವರ್ ಮೇಲೆ ಕುಳಿತು ವಿಡಿಯೋ ಮಾಡಿರುವ ರಂಗಪ್ಪ ಬೋವಿ, ರಾಜಕೀಯದಿಂದ ನೊಂದು, ಗ್ರಾಮಸ್ಥರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.

ಕಳೆದ 15 ವರ್ಷದಿಂದ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿರುವ ರಂಗಪ್ಪ ಬೋವಿಗೆ ಗ್ರಾಮಸ್ಥರು ಕಿರುಕುಳ ನೀಡುತ್ತಿದ್ದಾರಂತೆ. ಅಲ್ಲದೇ ರಾಜಕೀಯದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಪೊಲೀಸರು ದೌಡಾಯಿಸಿದ್ದು, ಕೆಳಗಿಳಿಯುವಂತೆ ಬೇಡಿಕೊಂಡಿದ್ದಾರೆ. ಆದರೆ, ರಂಗಪ್ಪ ಕೆಳಗೆ ಇಳಿಯಲಿಲ್ಲ ಇದರಿಂದ ಪೊಲೀಸರು, ಗ್ರಾಮಸ್ಥರ ಸುಸ್ತಾಗಿ ಹೋಗಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರಿನ ಕೈ ಟಿಕೆಟ್ ಕೊನೆಗೂ ಫೈನಲ್

Most Popular

Recent Comments