ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮನೆ ಮುಂದೆ ನಿಂತಿದ್ದ ಸ್ಥಳದಲ್ಲಿಯೇ ಧರೆ ಕುಸಿತವಾಗಿ ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಚಾಕು ಇರಿತ ಪ್ರಕರಣ, ವಿಘ್ನೇಶ್ ಸ್ಥಿತಿ ಗಂಭೀರ
ಮೇಲ್ಪಾಲ್ ಮೂಲದ ಶಶಿಕುಮಾರ್ ಮನೆ ಮುಂದೆ ಧರೆ ಕುಸಿತವಾಗಿದ್ದು, ಧರೆ ಕುಸಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡು ದಿನದಿಂದ ಮೇಲ್ಪಾಲ್ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನಲೆ ಈ ಘಟನೆ ನಡೆದಿದ್ದು, ಧರೆ ಕುಸಿತದ ಜಾಗದಿಂದ ತಕ್ಷಣ ಹಿಂದೆ ಬಂದಿದ್ದರಿಂದ ಅನಾಹುತ ತಪ್ಪಿದೆ.
ಚಿಕ್ಕಮಗಳೂರು: ಮನೆ ಮುಂದೆ ಕುಸಿದ ಧರೆ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ pic.twitter.com/VJqQwtaLkZ
— News Malnad (@NewsMalnadMedia) July 7, 2023
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕುವೆಂಪು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ; ಬೇಡಿಕೆ ಈಡೇರಿಸುವಂತೆ ಆಗ್ರಹ
- ಮಾರುಕಟ್ಟೆಯಲ್ಲಿ ಇಂದು ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 06.07.2023
- ರೈತರೇ ಗಮನಿಸಿ: ಇಂದಿನ ಅಡಿಕೆ ಧಾರಣೆ ಹೀಗಿದೆ; ಬೆಟ್ಟೆ, ಗೊರಬಲು, ಸರಕು, ಇಡಿ-06.07.2023
ಕುವೆಂಪು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ; ಬೇಡಿಕೆ ಈಡೇರಿಸುವಂತೆ ಆಗ್ರಹ
ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ; ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ
ಕುವೆಂಪು ವಿವಿಯು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು. ಈ ವಿವಿಯ ಹಲವಾರು ವಿದ್ಯಾರ್ಥಿಗಳು ಇಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಆದರೆ ಪ್ರಸ್ತುತ ಸಂದರ್ಭದಲ್ಲಿ, ವಿವಿಯ ಹಲವಾರು ಧೋರಣೆಗಳಿಂದ ವಿದ್ಯಾರ್ಥಿಗಳು ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಸುರಿವ ಮಳೆಯನ್ನು ಲೆಕ್ಕಿಸದೆ ಮೆರವಣಿಗೆ ಸಾಗಿ ಪ್ರತಿಭಟನೆಯನ್ನು ನಡೆಸಿದರು.
ಸೆಮಿಸ್ಟರ್ ಪರೀಕ್ಷೆ ಶುಲ್ಕ ದುಬಾರಿ;
ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಲು ಆಗ್ರಹಿಸಿದರು. ಪರೀಕ್ಷೆ ಶುಲ್ಕ ಕಡಿಮೆ ಮಾಡಲು ಆಗ್ರಹಿಸಿ ವಿವಿಧ ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದರೂ ಕುವೆಂಪು ವಿವಿಯು ಪರೀಕ್ಷಾ ಶುಲ್ಕ ಕಡಿಮೆ ಮಾಡದೆ nep ಮೊದಲ ಬ್ಯಾಚ್ ನ ಎರಡನೇ ಸೆಮ್ ನಾ b.sc ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದೆ. ರಾಜ್ಯದ ಬಹುತೇಕ ಎಲ್ಲಾ ವಿವಿಗಳ, nep ಬ್ಯಾಚ್ ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವು ಮಾರ್ಕ್ಸ್ ಕಾರ್ಡ್ ಶುಲ್ಕ ಸೇರಿದಂತೆ ಬಹುತೇಕ 1000 ರೂ.ಗಳ ಆಸುಪಾಸಿನಲ್ಲಿ ಇದೆ ಆದರೆ, ಕುವೆಂಪು ವಿವಿ ಭಾರಿ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು ಆದಷ್ಟು ಬೇಗ ಎಲ್ಲಾ ಕೋರ್ಸುಗಳ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ; ಮೂಡಿಗೆರೆ: ಶೆಡ್ ಗೆ ನುಗ್ಗಿ ಕಾರು ಪುಡಿ ಮಾಡಿರುವ ಕಾಡಾನೆ
ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸ್ಪಷ್ಟ ನೀತಿ ಇಲ್ಲದ ಕಾರಣ ವಿದ್ಯಾರ್ಥಿಗಳ ಪರದಾಟ:
ವಿದ್ಯಾರ್ಥಿ ವೇತನದ ವ್ಯವಸ್ಥೆಯಲ್ಲಿ ಹಲವು ದೋಷಗಳಾಗಿವೆ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಯುಯುಸಿಎಂಎಸ್ ವಿಳಂಬ ಮಾಡಿದೆ. ಇದೆ ಕಾರಣಕ್ಕೆ ತಾಂತ್ರಿಕ ದೋಷದಿಂದಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಇದನ್ನು ಕೂಡಲೆ ಪರಿಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಇದನ್ನೂ ಓದಿ; ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ