ರಿಪ್ಪನ್ ಪೇಟೆ: (ನ್ಯೂಸ್ ಮಲ್ನಾಡ್ ವರದಿ) ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಮೋಹಿನಿ (45) ಹಾಗೂ ಕೃಷ್ಣಮೂರ್ತಿ (47) ಗಂಭೀರ ಗಾಯಗಳಾಗಿರುವ ವ್ಯಕ್ತಿ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ; ಶೃಂಗೇರಿ ಕ್ಷೇತ್ರದಿಂದ ಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!
ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು
ತಳಲೆ ಗ್ರಾಮದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೋಡೂರು ಗ್ರಾಮದ ಚೂಡಾಮಣಿ ಮತ್ತು ಪತ್ನಿ ಮೋಹಿನಿ ಬೈಕ್‌ನಲ್ಲಿ ತಳಲೆ ಕಡೆ ಹೋಗುತ್ತಿದ್ದಾಗ ಮೂಗೂಡಿಗೆ ಬರುತಿದ್ದ ಮುತ್ತಿನಕೊಪ್ಪ ಗ್ರಾಮದ ಕೃಷ್ಣಮೂರ್ತಿ ಎಂಬುವವರ ಬೈಕ್ ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೊಲೀಸ್ ಠಾಣೆಯ ಮೇಲೆಯೇ ಹತ್ತಿ ಆತ್ಮಹತ್ಯೆಗೆ ಯತ್ನ
- ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆ..!?
- ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಭೇಟಿಯಾದ ಹಿಂದು ಬ್ರಿಗೇಡ್ ಪ್ರವೀಣ್ ಖಾಂಡ್ಯ, ಹಾಗೂ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್
ಈ ಅಪಘಾತದಲ್ಲಿ ಮೋಹಿನಿ ಹಾಗೂ ಕೃಷ್ಣಮೂರ್ತಿ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ತಿರುವಿನಲ್ಲಿ ನಡೆದ ಘಟನೆಯಾಗಿದ್ದು ಎಡಭಾಗದಲ್ಲಿ ಸಾಗಬೇಕಾದ ಒಂದು ಬೈಕ್ ತಿರುವಿನಲ್ಲಿ ನಿಯಂತ್ರಣಕ್ಕೆ ಬಾರದೆ ಬಲಭಾಗಕ್ಕೆ ಸಾಗಿದ ಪರಿಣಾಮವಾಗಿ ಬಲಭಾಗದಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಬಿಜೆಪಿ ಅಭ್ಯರ್ಥಿ ಜೀವರಾಜ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?