Tuesday, November 28, 2023
Homeರಾಜಕೀಯ"ದೇಶಕ್ಕಾಗಿ ಹೋರಾಟ ಮಾಡಿ ಮಡಿದವರ ಬಗ್ಗೆ ಗೌರವದಿಂದ ಮಾತನಾಡಬೇಕು" : ಪ್ರಿಯಾಂಕ ಖರ್ಗೆ & ಸಿ.ಟಿ...

“ದೇಶಕ್ಕಾಗಿ ಹೋರಾಟ ಮಾಡಿ ಮಡಿದವರ ಬಗ್ಗೆ ಗೌರವದಿಂದ ಮಾತನಾಡಬೇಕು” : ಪ್ರಿಯಾಂಕ ಖರ್ಗೆ & ಸಿ.ಟಿ ರವಿಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ ಡಿ ಕುಮಾರಸ್ವಾಮಿ,

ರಾಮನಗರ: ಸಿ.ಟಿ.ರವಿ ಮತ್ತು ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಗಮನಿಸಿದ್ದೇನೆ ದೇಶಕ್ಕಾಗಿ ಹೋರಾಟ ಮಾಡಿರುವವರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ನೆಹರು ವಿಚಾರವಾಗಿ ಹೇಳಿಕೆ ನೀಡಿದ ಸಿ.ಟಿ.ರವಿ ಹಾಗೂ ವಾಜಪೇಯಿ ಬಗ್ಗೆ ಹೇಳಿಕೆ ನೀಡಿದೆ ಪ್ರಿಯಾಂಕ ಖರ್ಗೆ ಯವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕೆ. ಟಾಂಗ್ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅವರವರ ವೈಯಕ್ತಿಕ ವಿಚಾರಗಳೇ ಬೇರೆ, ನೆಹರು ಅವರು, ಇಂದಿರಾ ಗಾಂಧಿಯವರು, ವಾಜಪೇಯಿ ರವರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರುರವರು ಈ ದೇಶಕ್ಕೆ ಅವರದ್ದೆ ಆದ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತರುವ ವಿಚಾರದಲ್ಲಿ ಅತಿಹೆಚ್ಚು ಜೈಲುವಾಸವನ್ನು ನೆಹರು ಅನುಭವಿಸಿದ್ದಾರೆ ಎಂದಿದ್ದಾರೆ.

ಸ್ವಾತoತ್ರ‍್ಯ ಬಂದ ನಂತರವೂ ಹಲವು ಸವಾಲುಗಳಿತ್ತು. ಪ್ರಧಾನಮಂತ್ರಿಯಾಗಿದ್ದ ವೇಳೆ ಹಲವು ಸವಾಲುಗಳನ್ನ ಎದುರಿಸಿದ್ದಾರೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ವಿಚಾರದಲ್ಲಿ ನೆಹರುರವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೃಷಿ ವಲಯ, ಕೈಗಾರಿಕಾ ವಲಯದಲ್ಲಿ ಅವರ ಕೊಡುಗೆ ದೊಡ್ಡದು ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ದೇಶದ ನಾಯಕರ ಬಗ್ಗೆ ಲಘುವಾಗಿ ಮಾತನಾಡಬೇಡಿ. ಇದರಿಂದ ನಮ್ಮ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ಕುಮಾರಸ್ವಾಮಿಯವರು ವಾಗ್ದಾಳಿಯನ್ನು ಮಾಡಿದ್ದಾರೆ.

Most Popular

Recent Comments