Wednesday, November 29, 2023
Homeರಾಜಕೀಯಆಡಳಿತದ ಹೆಸರಿನಲ್ಲಿ ಜನರ ಹಣವನ್ನು ಬಕಾಸುರನ ರೀತಿ ನುಂಗುವುದು ಬಿಜೆಪಿಯವರ ಅಭಿವೃದ್ಧಿ : ಹೆಚ್. ಡಿ....

ಆಡಳಿತದ ಹೆಸರಿನಲ್ಲಿ ಜನರ ಹಣವನ್ನು ಬಕಾಸುರನ ರೀತಿ ನುಂಗುವುದು ಬಿಜೆಪಿಯವರ ಅಭಿವೃದ್ಧಿ : ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ

ಮೈಸೂರು: ಆಡಳಿತ ಎಂಬ ಹೆಸರಿನಲ್ಲಿ ಜನರ ಹಣವನ್ನು ಬಕಾಸುರನ ಹಾಗೆ ನುಂಗುವುದು ಬಿಜೆಪಿಯವರ ಅಭಿವೃದ್ಧಿ. ರಾಜ್ಯದ ಸಾಮಾನ್ಯ ಜನರ ಮತ್ತು ರೈತರ ಅಭಿವೃದ್ಧಿಗೊಳಿಸುವುದು ಬಿಜೆಪಿಯವರಿಗೆ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷದವರಿಗೆ ರೈತರ ಮತ್ತು ನಾಡಿನ ಮತದಾರರನ್ನು ಅಭಿವೃದ್ಧಿ ಮಾಡುವುದು ಅಗತ್ಯವಿಲ್ಲ, ಬಿಜೆಪಿ ನಾಯಕರ ಹಿಂಬಾಲಕರಾಗಿ ಬಾವುಟವನ್ನು ಹಿಡಿದು ನಿಲ್ಲುವಂತಹ ಜನರ ಅಭಿವೃದ್ಧಿ ಮಾತ್ರ ಮುಖ್ಯ ಎಂದು ಟೀಕಿಸಿದರು.

ಈಗಾಗಲೇ ಅತಿಯಾದ ಮಳೆಯಿಂದ ಸಾವಿರಾರು ಲಕ್ಷಗಟ್ಟಲೆ ಬೆಳೆದ ಬೆಳೆಗಳು ನಾಶ ಆಗಿದೆ ಇದರಿಂದ ರೈತರು ಕಷ್ಟದಲ್ಲಿ ದಿನದೂಡುತ್ತಿದ್ದಾರೆ ಇಂತಹ ಜನರಿಗೆ ನೆರವಾಗುವ ಬದಲು ಅವರು ಜನಸ್ವರಾಜ್ ಯಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.

ಚಿಕ್ಕಬಳ್ಳಾಪುರದಲ್ಲಿ ಮನೆಯನ್ನು, ತಾವು ಬೆಳೆದ ಬೆಳೆಗಳನ್ನು ಕಳೆದಕೊಂದ ರೈತರಿಗೆ 3 ಲಕ್ಷ ಹಣವನ್ನು ಪರಿಹಾರ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಅವರು ಘೋಷಣೆ ಮಾಡಿದ್ದರೇ ಹೊರತು ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದರು.

ಮಳೆಯಿಂದ ನಷ್ಟವಾಗಿರುವ ಪ್ರದೇಶಗಳಿಗೆ ಪರಿಹಾರವನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿದೆ ಆದರೆ ಅದನ್ನು ಹೇಗೆ ಬಳಸಬೇಕು ಎಂಫು ಅವರಿಗೆ ತಿಳಿದಿಲ್ಲ, ಬೇರೆ ಪಕ್ಷದವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೊದಲು ಸುಸಜ್ಜಿತವಾಗಿ ಆಡಳಿತದ ಕಡೆ ಗಮನ ಹರಿಸಿ ಎಂದು ಕಿಡಿಕಾರಿದರು.

Most Popular

Recent Comments