ಕಲಬುರಗಿ: ಆರ್ ಎಸ್ ಎಸ್ ಪಕ್ಷ ಇಡೀ ಭಾರತ ದೇಶವನ್ನೇ ಹಾಳುಮಾಡುವ ಪಕ್ಷ ಎಂದು ಕುಮಾರಸ್ವಾಮಿ ಆರ್ ಎಸ್ ಎಸ್ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ ಕುಮಾರಸ್ವಾಮಿ, ಈಗಿನ ಆರ್ ಎಸ್ ಎಸ್ ಪಕ್ಷ ದೇಶವನ್ನು ಹಾಳು ಮಾಡುವ ಸಂಘಟನೆ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿರುವ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್. ಡಿ ಕುಮಾರಸ್ವಾಮಿ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು? ಅಲ್ಪಸಂಖ್ಯಾತರಿಗೆ ಅವರು ಏನು ಕೊಡುಗೆ ನೀಡಿದ್ದಾರೆ ಇವರು ಇದೇ ರೀತಿ ಹೇಳಿಕೆ ನೀಡುತ್ತಿದ್ದರೆ ಸಿದ್ದರಾಮಯ್ಯನವರ ವಿರುದ್ಧ ಅಲ್ಪಸಂಖ್ಯಾತರೇ ತಿರುಗಿಬೀಳುತ್ತಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟನ್ನು ನೀಡಿದರು.
ಈ 40 ವರ್ಷಗಳ ಹಿಂದೆ ಇದ್ದ ಆರ್ ಎಸ್ ಎಸ್ ಬೇರೆ, ಈಗ ಇರುವ ಆರ್ ಎಸ್ ಎಸ್ ಬೇರೆ ಸಂಘಟನೆಯೇ ಬೇರೆ ಇದು ದೇಶವನ್ನು ಹಾಳುಮಡುತ್ತದೆ ಎಂದರು.