Wednesday, November 29, 2023
Homeಇತರೆಸಿದ್ದರಾಮಯ್ಯ ಆಡುವ ಮಾತಿಗೆ ಹೆದರಿ ದೇಶದಲ್ಲಿ ತೈಲದ ಬೆಲೆಯನ್ನು ಇಳಿಸಿದ ಪ್ರಧಾನಿ ಮೋದಿ: ಹೆಚ್, ಡಿ,...

ಸಿದ್ದರಾಮಯ್ಯ ಆಡುವ ಮಾತಿಗೆ ಹೆದರಿ ದೇಶದಲ್ಲಿ ತೈಲದ ಬೆಲೆಯನ್ನು ಇಳಿಸಿದ ಪ್ರಧಾನಿ ಮೋದಿ: ಹೆಚ್, ಡಿ, ದೇವೇಗೌಡ ವ್ಯಂಗ್ಯ

ಬೆಂಗಳೂರು: ಸಿದ್ದರಾಮಯ್ಯನವರು ನರೇಂದ್ರ ಮೋದಿಗೆ ದೇಶದಲ್ಲಿ ತೈಲದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಇಳಿಸಲು ಟಾರ್ಚರ್ ಮಾಡಿದ್ದರಿಂದ ಬೆಲೆ ಇಳಿಕೆ ಮಾಡಿದರು ಎಂದು ಹೆಚ್, ಡಿ, ದೇವೇಗೌಡ ಹೇಳಿದರು.

ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆಯನ್ನು ಇಳಿಕೆ ಮಾಡಿದ ಬಗ್ಗೆ ಮಾಧ್ಯಮ ವರ್ಗದವರರೊಂದಿಗೆ ಮಾತನಾಡಿದ ದೇವೇಗೌಡ ಸಿದ್ದರಾಮಯ್ಯ ನವರು ಆಡುವ ಮಾತಿನ ಪೆಟ್ಟಿನಿಂದಾಗಿ ಮತ್ತು ಅವರು ಮೋದಿ ಮತ್ತು ಕೇಂದ್ರಸರ್ಕಾರದ ಮೇಲೆ ದಾಳಿ ಮಾಡಿದ್ದರಿಂದ ಮೋದಿಗೆ ಜ್ಞಾನೋದಯವಾಗಿ ತೈಲದ ಬೆಲೆಯನ್ನು ಇಳಿಕೆ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ತಕ್ಷಣವೇ ತೈಲದ ಬೆಲೆಯನ್ನು 5 ಮತ್ತು 10 ರೂಪಾಯಿಗೆ ಇಳಿಸಿದ್ದಾರೆಂದರೆ ಮೋದಿಗೆ ಸಿದ್ದರಾಮಯ್ಯನವರನ್ನು ಕಂಡರೆ ಅದೆಷ್ಟು ಭಯವಿರಬಹುದು. ಹೆದರಿಕೊಂಡು ತೈಲದ ಬೆಲೆಯನ್ನು ಇಳಿಸಿದ್ದಾರೆ ಅಲ್ಲದೇ ಮೋದಿ ಇನ್ನು 3 ವರ್ಷ ದೇಶದ ಪ್ರಧಾನಿಯಾಗಿರುತ್ತಾರೆ ಆದರೆ ಸಿದ್ದರಾಮಯ್ಯ ಇನ್ನೂ ಯುವಕ ಅವರು ಮೋದಿಗೆ ಫೈಟ್ ಕೊಡುತ್ತಾರೆ. ನನಗೆ 89 ವರ್ಷ ವಯಸ್ಸಾಗಿದೆ ಆದರೂ ರಾಜಕೀಯ ಮಾಡುತ್ತಿದ್ದೇನೆ ಎಂದು ಲೇವಡಿ ಮಾಡಿದರು.

Most Popular

Recent Comments