ಆದಾಯ ತೆರಿಗೆ ಕಾಯ್ದೆ-1961 ರ ಪ್ರಕಾರ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಇದಕ್ಕಾಗಿ ಈಗಾಗಲೇ ಗಡುವು ಮುಗಿದು. 1000 ರೂ.ಗಳ ಶುಲ್ಕದೊಂದಿಗೆ ಮಾರ್ಚ್ 31 ರೊಳಗೆ ಸಂಪರ್ಕವನ್ನು ಪೂರ್ಣಗೊಳಿಸಬೇಕು ಎಂದು ಘೋಷಿಸಿತ್ತು. ಕೊನೆ ದಿನಾಂಕಕ್ಕೆ ಎರಡು ದಿನ ಬಾಕಿ ಇರುವಾಗ ಮತ್ತೆ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪಾನ್ ಅಮಾನ್ಯವಾಗುತ್ತದೆ. ಅಮಾನ್ಯವಾದ ಪಾನ್‌ನೊಂದಿಗೆ ನಿಯಮಗಳ ಪ್ರಕಾರ ವಹಿವಾಟು ನಡೆಸಲು ಸಾಧ್ಯವಿಲ್ಲ.
ಇದನ್ನೂ ಓದಿ; ಚಿಕ್ಕಮಗಳೂರು: ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣ
ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ? ಇಲ್ಲವಾದರೆ, ತಕ್ಷಣ ಕಾರ್ಯವನ್ನು ಪೂರ್ಣಗೊಳಿಸಿ. ಹೇಗೆ ಲಿಂಕ್ ಮಾಡುವುದು? ತಿಳಿಯಿರಿ.
ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ -23.06.2023
ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಲಿಂಕ್ ಆಗಿದೆಯೇ ಇಲ್ಲವೇ ಎಂಬ ಅನುಮಾನವಿದ್ದಲ್ಲಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಪರಿಶೀಲಿಸಬಹುದು.
ಇದನ್ನೂ ಓದಿ; ಮೂಡಿಗೆರೆ: ಚಾರ್ಮಾಡಿ ಘಾಟಿಯ ಅಪಾಯದ ಬಂಡೆ ಮೇಲೆ ಹತ್ತಿ ಪ್ರವಾಸಿಗರ ಹುಚ್ಚಾಟ
ಪರಿಶೀಲಿಸುವ ಕ್ರಮ:
https://www.incometax.gov.in/iec/foportal
ಎಡಬದಿಯಲ್ಲಿ Quick Links ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್(click) ಮಾಡಿ
ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your Pan Is Already Linked To Given Aadhaar “(ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.
ಈ ಪ್ರಕ್ರಿಯೆಯನ್ನು ನೀವು ಇನ್ಕಮ್ ಟ್ಯಾಕ್ಸ್ ವೆಬ್‌ಸೈಟ್‌ಗೆ ಲಾಗಿನ್ ಅಗದೆಯೇ ಪಡೆಯಬಹುದಾದ ಸೇವೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ತೀರ್ಥಹಳ್ಳಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ
- ಕಾರು ಹಾಗೂ ಮಿನಿ ಕ್ಯಾಂಟರ್ ವಾಹನದ ನಡುವೆ ಅಪಘಾತ
- ಚಿಕ್ಕಮಗಳೂರು: ನಿಧಿಗಾಗಿ ಮಧ್ಯರಾತ್ರಿ 25 ಅಡಿ ಆಳದ ಗುಂಡಿ ತೆಗೆದ ದುಷ್ಕರ್ಮಿಗಳು
ಇನ್ಕಮ್ ಟ್ಯಾಕ್ಸ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಪರಿಶೀಲಿಸುವ ಕ್ರಮ:
ಇನ್ನೂ ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್‌ಗೆ https://incometaxindiaefilling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು. ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ.
ಹಾಗಾದರೆ ಲಿಂಕ್ ಮಾಡುವುದು ಹೇಗೆ?:
* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ https://incometaxindiaefilling.gov.in/
* ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಲಾಗ್ ಇನ್ ಆಗಿ.
* ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀಡಿರುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಮೆನು ಬಾರ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್‌ಗಳು’ ಗೆ ಹೋಗಿ ಮತ್ತು ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
* PAN ವಿವರಗಳ ಪ್ರಕಾರ ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕದ ವಿವರ ಈಗಾಗಲೇ ನಮೂದಿಸಲಾಗಿದೆ.
* ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪ್ಯಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಿ.
* ಸರಿ ಇಲ್ಲದಿದ್ದರೆ ನೀವು ಅಲ್ಲಿಯೇ ದಾಖಲೇ ಸರಿಪಡಿಸಿಕೊಳ್ಳಬಹುದು.
* ದಾಖಲೆ ಸರಿ ಇದ್ದು ಹೊಂದಾಣಿಕೆಯಾದರೆ ಆಧಾರ್ ಸಂಖ್ಯೆಯನ್ನು ನಮೂದಿಸಿ
* “ಈಗ ಲಿಂಕ್” ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಪ್ಯಾನ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಪಾಪ್-ಅಪ್ ಸಂದೇಶವು ನಿಮಗೆ ಕಾಣಸುತ್ತದೆ.