ಹಾಸನ: ಹಾಸನ ಜಿಲ್ಲೆಯ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರವಾದ ಶ್ರವಣಬೆಳಗೊಳದ ಸಮೀಪದ ನಾಗಯ್ಯನಕೊಪ್ಪಲು ಗ್ರಾಮದಲ್ಲಿ 10 ನೇ ಶತಮಾನದ ಕಲ್ಲಿನ ಶಾಸನ ಮಂಗಳವಾರ ಪತ್ತೆಯಾಗಿದೆ.
ಪುರಾತತ್ವ ಇಲಾಖೆಯ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ಆ ಶಾಸನಧ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ ಹಾಗೂ ಈ ಶಾಸನದಲ್ಲಿ ಕನ್ನಡ ಸಾಹಿತ್ಯವಿದೆ ಎಂದು ತಿಳಿಸಿದ್ದಾರೆ.
ಕೃಷಿ ಕೆಲಸ ಮಾಡುವಾಗ ಈ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಸಂರಕ್ಷಿಸಲಾಗಿರುವ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಎಸ್ ಎನ್ ಪಿಯು ಕಾಲೇಜಿನ ಸಂಶೋಧಕ ಮತ್ತು ಉಪನ್ಯಾಸಕ ಡಾ ಎಸ್ ದಿನೇಶ್ ಪ್ರಕಾರ, ಈ ಶಾಸನದಲ್ಲಿ ಮೌರ್ಯ ವಂಶದ ಜೈನ ಧರ್ಮ ಮತ್ತು ದೊರೆ ಚಂದ್ರಗುಪ್ತನ ಬಗ್ಗೆ ಮಾಹಿತಿ ಉಲ್ಲೇಖವಾಗಿದೆ ಎಂದು ಸೂಚಿಸಿದ್ದಾರೆ.