ಹಾಸನ: ನಟ ಪುನೀತ್ ಬದಲು ರಾಜಕಾರಣಿಗಳನ್ನು ಸಾಯಿಸಬಹುದಿತ್ತು. ಅವರನ್ನು ಮೊದಲು ಸಾಯಿಸು ಎಂದು ಪತ್ರವನ್ನು ಬರೆದು ದೇವರ ಹುಂಡಿಗೆ ಹಾಕಿದ್ದಾರೆ.
ಹಾಸನಾಂಬೆಯ ಭಕ್ತರು ಸಲ್ಲಿಸಿದ್ದ ಅನೇಕ ಕೋರಿಕೆ ಪತ್ರಗಳ ನಡುವೆ ಪುನೀತ್ ರವರ ಅಕಾಲಿಕ ಮರಣದಿಂದ ನೊಂದ ಅಭಿಮಾನಿ ಈ ರೀತಿಯಾಗಿ ಪತ್ರವನ್ನು ಬರೆದಿದ್ದರು.
ಪತ್ರದಲ್ಲಿ ಹಾಸನಾಂಬ ತಾಯಿಗೆ ನನ್ನ ಕೋಟಿ ಕೋಟಿ ನಮನಗಳು,ಅಮ್ಮಾ, ಆ ಧರ್ಮಾತ್ಮ ಪುನೀತ್ ರಾಜ್ ಕುಮಾರ್ ನನ್ನ ಸಾಯಿಸುವುದರ ಬದಲು ಈ ರಾಜಕೀಯದಲ್ಲಿ ನಾಟಕವಾಡಿ ಅವರೂ ತಿಂದು ಮರಿ ಮಕ್ಕಳು ತಿಂದು ತೇಗಿದರೂ, ಕರಗದಷ್ಟು ಆಸ್ತಿಯನ್ನು ಮಾಡಿ ಸಭೆಗಳಲ್ಲಿ ನಾಟಕವಾಡುತ್ತಾರಲ್ಲ ಅಂತಹ ರಾಜಕಾರಣಿಗಳನ್ನು ಸಾಯಿಸಮ್ಮ ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ. ಬಡವರು ಸುಖವಾಗಿರುತ್ತಾರೆ. ಕೋಟಿ ಕೋಟಿ ತಿಂದು ತೇಗುವ ರಾಜಕಾರಣಿಗಳಿಗೆ ಬೇಗ ಸಾವು ಬರಲಿ ಎಂದು ಅವಾಚ್ಯ ಶಬ್ದಗಳನ್ನು ಬಳಸಿ ರಾಜಕಾರಣಿಗಳನ್ನು ನಿಂದಿಸಿ ಪತ್ರ ಬರೆದಿದ್ದರು.