ಮೈಸೂರು: ಹಂಸಲೇಖರವರು ಕ್ಷಮೆ ಕೋರುವಂತಹ ಮತ್ತು ಮತ್ತೊಬ್ಬರಿಗೆ ನೋವುಂಟು ಮಾಡುವ ಮಾತನ್ನು ಆಡಿಲ್ಲ. ಆದರೂ ಪೇಜಾವರ ಗುರುಗಳ ಬೃಂದಾವನದಲ್ಲಿ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿರುವವರು ನಮ್ಮೊಂದಿಗೆ ಚರ್ಚೆಗೆ ಬನ್ನಿ ಎಂದು ಮಾಜಿ ಮೇಯರ್ ಪುರುಷೋತ್ತಮ್ ಸವಾಲು ಹಾಕಿದರು.
ಮೈಸೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹಂಸಲೇಖನವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವವರಿಗೆ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ಯಾವುದೇ ಜಾತಿ. ಧರ್ಮ ಹಾಗೂ ವ್ಯಕ್ತಿಯ ವಿರುದ್ಧ ಮಾತನಾಡಿಲ್ಲ. ಈಗ ವಾಸ್ತವದಲ್ಲಿರುವ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಅಷ್ಟೇ, ಹಂಸಲೇಖರಿಗೆ ಪೇಜಾವರ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವವಿದೆ, ದಲಿತರ ಮನೆಗೆ ಹೋದರೆ ಅವರು ನೀಡುವ ಮಾಂಸವನ್ನು ಸೇವಿಸುತ್ತಾರೆಯೇ ಎಂದು ಹೇಳಿದ್ದರು. ಈ ಮಾತಿನಿಂದ ರಾಜ್ಯದಲ್ಲಿ ಜನರ ವ್ಯಾಪಕ ಚರ್ಚೆಗೆ ಗುರಿಯಾಗಿದ್ದರು. ಘಟನೆಯ ನಂತರ ಹಂಸಲೇಖರವರು ವೈಯಕ್ತಿಕವಾಗಿ ಕ್ಷಮೆಯನ್ನು ಕೋರಿದ್ದಾರೆ ಆದರೂ ನಾಲ್ಕು ಗೋಡೆಯ ಮುಂದೆ ನಿಂತು ಕ್ಷಮೆ ಕೇಳುವುದಲ್ಲ ಬಹಿರಂಗವಾಗಿ ಗುರುಗಳ ಬೃಂದಾವನದಲ್ಲಿ ನಿಂತು ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹಿಸಿದ್ದರು.
ಹಂಸಲೇಖನವರು ಬಹಿರಂಗ ಕ್ಷಮೆ ಕೇಳಲು ಆಗ್ರಹಿಸುತ್ತಿರುವುದು ಸರಿಯಲ್ಲ. ಅವರು ಬಹಿರಂಗ ಕ್ಷಮೆ ಕೇಳುವ ತಪ್ಪನ್ನು ಮಾಡಿಲ್ಲ ಅವರೊಂದಿಗೆ ಶೋಷಿತ ಸಮುದಾಯ, ಹಿಂದುಳಿದ ವರ್ಗದ ಸಮುದಾಯಗಳಿವೆ ಎಂದು ಹಂಸಲೇಖರಿಗೆ ಪುರುಷೋತ್ತಮ್ ಬೆಂಬಲವನ್ನು ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಎಸ್ ಪಿ ಮುಖಂಡ ಆದರ್ಶ ರಾಜವಂಶಿ, ಸಿದ್ದಸ್ವಾಮಿ, ಅಶೋಕ್, ಶ್ಯಾಮ್, ಭಾಗವಹಿಸಿದ್ದರು