Sunday, October 1, 2023
Homeಇತರೆಹಂಸಲೇಖ ಮಾಡಿರುವ ಟೀಕೆಗೆ ಶ್ರೀ ಕೃಷ್ಣನೇ ಪ್ರತಿಕಾರ ತೀರಿಸುತ್ತಾನೆ : ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ...

ಹಂಸಲೇಖ ಮಾಡಿರುವ ಟೀಕೆಗೆ ಶ್ರೀ ಕೃಷ್ಣನೇ ಪ್ರತಿಕಾರ ತೀರಿಸುತ್ತಾನೆ : ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಪ್ರತಿಕ್ರಿಯೆ

ಉಡುಪಿ: ಹಂಸಲೇಖ ಮಾಡಿರುವ ಟೀಕೆಗೆ ಶ್ರೀಕೃಷ್ಣನೇ ಪ್ರತೀಕಾರ ನೀಡುತ್ತಾನೆ ಎಂದು ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಹೇಳಿಕೆಯನ್ನು ನೀಡಿದರು.

ಇಂದು ಬೆಳಿಗ್ಗೆ ಮಧ್ಯಮಗಳಿಗೆ ಹೇಳಿಕೆಯನ್ನು ನೀಡಿರುವ ಶ್ರೀಗಳು ” ಹಂಸಲೇಖ ಮಾಡಿರುವ ಹೇಳಿಕೆಗೆ ನಾವು ಪ್ರತಿಭಟನೆಯನ್ನು ನಡೆಸುವುದಿಲ್ಲ. ಅವರು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಶ್ರೀಕೃಷ್ಣನೇ ಪ್ರತಿಕಾರ ನೀಡುತ್ತಾನೆ ” ಎಂದು ಹೇಳಿದರು.

ದಲಿತ ಸಮುದಾಯದವರ ಮನೆಗೆ ಭೇಟಿ ನೀಡಿದ ಶ್ರೀಗಳು ಕುರಿ ಕೋಳಿ ಮಾಂಸವನ್ನು ನೀಡಿದರೆ ತಿನ್ನುತ್ತಿದ್ದರೇ ಎಂದು ಹಂಸಲೇಖ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವನ್ನು ನೀಡಿದ ಶ್ರೀಗಳು ಹಂಸಲೇಖ ಅವರಿಗೆ ಇಂತಹ ಹೇಳಿಕೆಯನ್ನು ನೀಡಿದ ಪ್ರಚಾರ ಬೇಕಿರಲಿಲ್ಲ, ಈ ರೀತಿಯ ಮಾತುಗಳನ್ನು ಅವರು ಆಡಬಾರದಿತ್ತು. ನಮ್ಮ ಗುರುಗಳು ವಿಶ್ವೇಶ್ವರ ತೀರ್ಥ ಶ್ರೀಪಾದರು ಯಾವತ್ತೂ ಪ್ರಚಾರಕ್ಕಾಗಿ ದಲಿತರ ಮನೆಗೆ ಹೋಗುವ ಕಾರ್ಯ ಮಾಡಿಲ್ಲ ಅವರು ವಿಗ್ರಹದಲ್ಲಿ ಮಾತ್ರವಲ್ಲದೇ ಎಲ್ಲಾ ಜನರ ಹೃದಯದಲ್ಲಿಯೇ ಕೃಷ್ಣನನ್ನು ಕಂಡಿದ್ದರು ಎಂದು ಹೇಳಿದರು.

Most Popular

Recent Comments