ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ದಲಿತರ ಮನೆಗೆ ಭೇಟಿ ನೀಡಿದ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದೂರು ದಾಖಲಾಗಿದೆ.
ಕೃಷ್ಣರಾಜ್ ಎಂಬ ವ್ಯಕ್ತಿ ಬೆಂಗಳೂರಿನ ಹನುಮಂತ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರನ್ನು ನೀಡಿ ನಂತರ ಮಾತನಾಡಿದ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖರವರು ಸ್ವಾಮೀಜಿಗಳು ದಲಿತರ ಮನೆಗೆ ಹೋಗಿದ್ದ ಸಮಯದಲ್ಲಿ ದಲಿತರು ಕೋಳಿಯ ಮಾಂಸವನ್ನು ನೀಡಿದ್ದರೇ ಅವರು ಅದನ್ನು ತಿನ್ನುತ್ತಿದ್ದರೇ, ಕುರಿ ರಕ್ತದ ಫ್ರೈ, ಲಿವರ್ ಫ್ರೈ, ನನ್ನು ಸೇವಿಸುತ್ತಿದ್ದರೆ ಎಂದು ಹೇಳಿದ್ದರು. ಇದರಿಂದ ಅನೇಕ ಜನರು ಹಂಸಲೇಖ ರವರು ಧಾರ್ಮಿಕ ಆಚಾರ ವಿಚಾರಗಳಿಗೆ ದಕ್ಕೆ ತಂದಿದ್ದಾರೆ. ಸಾಮಾಜಿಕ ಸಾಮರಸ್ಯಕ್ಕಾಗಿ ಪೇಜಾವರ ಶ್ರೀಗಳು ಕೈಗೊಂಡಿದ್ದ ಕಾರ್ಯಕ್ರಮದ ಬಗ್ಗೆ ಹಂಸಲೇಖ ಲೇವಡಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.