ಬೆಂಗಳೂರು: ಪೇಜಾವರ ಶ್ರೀ ಗಳ ಕುರಿತು ಹೇಳಿಕೆ ನೀಡಿದ್ದ ಪ್ರಕರಣದ ದೂರಿನಲ್ಲಿ ತನಿಖೆಗೆ ಒಮ್ಮೆ ನೀಡಿದ ನೋಟಿಸ್ ಗೆ ಪೊಲೀಸ್ ಠಾಣೆಗೆ ಬರದ ಹಂಸಲೇಖರಿಗೆ ಪೊಲೀಸರು ಎರಡನೇ ನೋಟಿಸ್ ನನ್ನು ನೀಡಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖನವರು ಪೇಜಾವರ ಶ್ರೀಗಳ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವರು ಪ್ರಯೋಗಿಸಿದ್ದ ಪದಗಳು ರಾಜ್ಯದ ಜನರ ವಿವಾದಕ್ಕೆ ಕಾರಣವಾಗಿತ್ತು.
ವಿವಾದದ ನಂತರ ಹಂಸಲೇಖ ಕ್ಷಮೆಯನ್ನು ಸಹ ಕೇಳಿದ್ದರು. ಆದರೂ ಬಹಿರಂಗವಾಗಿ ಗುರುಗಳ ಬೃಂದಾವನದ ಎದುರಿನಲ್ಲಿ ನಿಂತು ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ದೂರನ್ನು ನೀಡಿದ್ದರು. ಇಂದು ಅಖಿಲ ಭಾರತ ಬ್ರಾಹ್ಮಣ ಸಮಾಜವರ್ಗದವರು ಕೂಡಲೇ ಹಂಸಲೇಖರನ್ನು ಬಂಧಿಸಬೇಕು ಎಂದು ಅಗ್ರಹಿಸಿ ಪ್ರತಿಭಟನೆ ನಡೆಸಿ ದೂರನ್ನು ನೀಡಿದ್ದರು.
ಈ ಹಿಂದೆಯೇ ಪೊಲೀಸರು ತನಿಖೆಗೆ ಪೊಲೀಸ್ ಠಾಣೆಗೆ ಬರುವಂತೆ ಹಂಸಲೇಖನವರಿಗೆ ನೋಟಿಸ್ ನನ್ನು ನೀಡಿದ್ದರು, ಆದರೂ ಸಹ ಹಂಸಲೇಖ ವಿಚಾರಣೆಗೆ ಬಾರದ ಕಾರಣ ಪೊಲೀಸರು ಎರಡನೇ ಬಾರಿ ನೋಟಿಸ್ ನನ್ನು ನೀಡಿದ್ದಾರೆ.