ಬೆಂಗಳೂರು: ಹಂಸಲೇಖನವರ ಆರೋಗ್ಯದ ಬಗ್ಗೆ ರಾಜ್ಯದಲ್ಲಿ ಸುಳ್ಳು ವದಂತಿ ಹರಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಹಂಸಲೇಖನವರು ತೆರೆ ಎಳೆದಿದ್ದಾರೆ.
ಹಂಸಲೇಖನವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ರಾಜ್ಯದಾದ್ಯಂತ ಸುಳ್ಳು ವದಂತಿ ಹರಡಿತ್ತು ಅದಕ್ಕೆ ಸ್ವತಃ ಹಂಸಲೇಖರವರೇ ರಾಜ್ಯದ ಜನತೆಗೆ ಅವರ ಅಭಿಮಾನಿಗಳಿಗೆ ಪತ್ರ ಬರೆದ್ದಿದ್ದಾರೆ.
ನನಗೆ ಆರೋಗ್ಯ ತಪ್ಪಿದೆ ಎಂಬ ವದಂತಿಯಿಂದ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಕರೆಗಳು ಬಂದಿದೆ ಎಲ್ಲ ಅಭಿಮಾನಿಗಳು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ನನಗೆ ತಿಳಿದಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖವನ್ನು ಇಂದು ನಾನು ಅನುಭವಿಸುತ್ತಿದ್ದೀನಿ. ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಇಂದು ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯವನ್ನು ತುಂಬಿದ್ದಾರೆ. ಈಗ ಇಡೀ ಕರ್ನಾಟಕದ ಜನ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅತಿಯಾದ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ. ಆದರೆ ಅವರ ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕಿವಿಗಳಿಗೆ ಕೇಳಿಸುತ್ತದೆ. ಮನಸ್ಸನ್ನು ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ ನಾನು ಅರೋಗ್ಯವಾಗಿದ್ದೇನೆ ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು ನಿಮ್ಮ ಹಂಸಲೇಖ” ಎಂದು ರಾಜ್ಯದ ಜನತೆಗೆ ಪತ್ರವನ್ನು ಬರೆದಿದ್ದಾರೆ.
ಅನೇಕ ಜನರು ಪೇಜಾವರ ಶ್ರೀಗಳ ವಿಚಾರದಲ್ಲಿ ವಿವಾದಾತ್ಮಕ ಚರ್ಚೆ ನಡೆದ ಪರಿಣಾಮ ಹಂಸಲೇಖರವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸುಳ್ಳು ವದಂತಿಯನ್ನು ಹರಡಿಸಿದ್ದರು ಅದಕ್ಕೆ ಸ್ವತಃ ಹಂಸಲೇಖ ಅವರೇ ತೆರೆ ಎಳೆದಿದ್ದಾರೆ