ದಾವಣಗೆರೆ: ಆಕಸ್ಮಿಕ ಫೈರಿಂಗ್‌ನಿoದ ಗುಂಡು ತಗುಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಸೋಮವಾರ ಬೆಳಗ್ಗೆ ಈ ಅವಘಡವು ಸಂಭವಿಸಿದೆ.
ಚೇತನ್ (28) ಸಾವನ್ನಪ್ಪಿದ ಪೊಲೀಸ್ ಕಾನ್‌ಸ್ಟೇಬಲ್. ಬೆಳಗ್ಗೆಯ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಫೈರಿಂಗ್ ಆಗಿ ಗುಂಡು ತಗುಲಿದೆ. ಘಟನೆ ನಂತರ ತುರ್ತಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಚೇತನ್ ಅವರನ್ನು ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ಚೇತನ್ ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದ ಚೇತನ್‌ರವರು, 2012 ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ್ದರು. ಈ ಘಟನೆ ಬಗ್ಗೆ ಮಾಹಿತಿ ತಿಳಿದ ನಂತರ ಪೂರ್ವ ವಲಯ ಐಜಿಪಿ ಎಸ್ ರವಿ ಹಾಗೂ ಎಸ್‌ಪಿ ಸಿಬಿ ರಿಷ್ಯಂತ್ ಆಸ್ಪತ್ರೆಗೆ ಭೇಟಿಯನ್ನು ನೀಡಿದ್ದಾರೆ.